Advertisement

ಜನಸಂಖ್ಯೆ ಹೆಚ್ಚಳ ಪ್ರಗತಿಗೆ ಮಾರಕ

10:57 AM Jul 14, 2019 | Naveen |

ಶಹಾಪುರ: ಜನಸಂಖ್ಯೆ ಹೆಚ್ಚಿದಂತೆಲ್ಲಾ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಪ್ರಕೃತಿಯಲ್ಲಿ ಏರು ಪೇರು ಉಂಟಾಗಿ ಮಾನವನ ಬದುಕು ದುಸ್ತರವಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಬಿರಾದರ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಗಂಗನಾಳ ಗ್ರಾಮದಲ್ಲಿ ವನದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ತೀವ್ರ ಗತಿಯಲ್ಲಿ ಏರುತ್ತಿರುವ ಜನಸಂಖ್ಯೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಪ್ರೌಢವಸ್ಥೆಯಲ್ಲಿಯೇ ಮಕ್ಕಳಿಗೆ ಜನಸಂಖ್ಯೆ ಕುರಿತು ಶಿಕ್ಷ‌ಣ ನೀಡಬೇಕಾದ ಅಗತ್ಯವಿದೆ ಎಂದರು.

ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಬಸವರಾಜ ಅಂಗಡಿ ಮಾತನಾಡಿ, ಅನಕ್ಷರತೆ ಮತ್ತು ನಿರುದ್ಯೋಗತನದಿಂದ ಇಂದು ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಪ್ರತಯತ್ನಿಸುತ್ತಿದೆ. ನಾಗರಿಕರು ಈ ಕುರಿತು ತಿಳಿದುಕೊಳ್ಳಬೇಕು. ಜನಾಸಂಖ್ಯೆನ್ಪೋಟದಿಂದ ಮುಂದಿನ ಅನಾಹುತ ಅಗತ್ಯತೆಗಳ ಬಗ್ಗೆ ಅರಿತು ಸಹಕರಿಸಬೇಕು ಎಂದರು.

ಗ್ರಾಪಂ ಸದಸ್ಯ ಹೊನ್ನಪ್ಪ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಮಿತಿ ಮೀರಿದ ಜನಸಂಖ್ಯೆಯಿಂದ ಪ್ರಗತಿಯೂ ಕುಂಠಿತವಾಗುತ್ತದೆ. ಮಿತಿ ಮೀರಿದ ಜನಸಂಖ್ಯೆಯಿಂದ ದೇಶದ ಪ್ರಗತಿಗೆ ಮಾರಕವಾಗಲಿದೆ. ಕಾರಣ ಕೂಡಲೇ ಕಡಿವಾಣ ಹಾಕುವುದು ಅಗತ್ಯ ಎಂದರು.

Advertisement

ಇದೇ ವೇಳೆ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಕಲಾಲ್ಗೆ ಸನ್ಮಾನಿಸಲಾಯಿತು. ನಂತರ ಆಶಾ ಕಾರ್ಯಕರ್ತೆಯರಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.

ಪ್ರಮುಖರಾದ ನಂದಣ್ಣ ಪಾಟೀಲ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವರಾಜ ಜಾನೆ, ಹಿರಿಯ ಆರೋಗ್ಯ ಸಹಾಯಕ ಸಂತೋಷ ಮುಳಜೆ, ನಿಂಗಪ್ಪ ಮಾಸ್ತರ್‌, ಡಾ| ವಿ.ಎಂ. ಪಾಟೀಲ, ಕಿರಿಯ ಆರೋಗ್ಯ ಸಹಾಯಕ ಮಲ್ಲೇಶ ಕುರುಕುಂದಿ, ಬಸಲಿಂಗಪ್ಪ, ಗ್ರಾಪಂ ಸದಸ್ಯೆ ಶರಣಮ್ಮ, ಶರೀಫ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next