Advertisement

ಸೌಲಭ್ಯ ಕಲ್ಪಿಸಲು ಬದ್ಧ

11:25 AM Aug 05, 2019 | Team Udayavani |

ಶಹಾಪುರ: ಹಳೆಪೇಟೆಯ ವಗ್ಗರಾಯಣ್ಣ ಮುತ್ಯಾನ ನೂತನ ಮಂದಿರ ನಿರ್ಮಾಣ ಮತ್ತು ವಿಶೇಷ ಪೂಜೆ ಶ್ರದ್ಧೆ ಭಕ್ತಿಯಿಂದ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದ ಇಲ್ಲಿನ ಜನರ ಇಷ್ಟಾರ್ಥಗಳ ಈಡೇರಿಸುವ ಜೊತೆಗೆ ಈ ಕ್ಷೇತ್ರದಲ್ಲಿ ಸಮೃದ್ಧ ಮಳೆ ಬೆಳೆಯಾಗಿ ರೈತರ ಕಷ್ಟ ನಿವಾರಿಸಲಿ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

Advertisement

ನಗರದ ಹಳಪೇಟೆಯಲ್ಲಿ ವಗ್ಗರಾಯಣ್ಣ ಮುತ್ಯಾನ ಮಂದಿರ ಉದ್ಘಾಟಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಸಮಾಜ ಸಶಕ್ತವಾಗಬೇಕು. ಕಾಯಕ ನಿಷ್ಠೆ, ಧಾರ್ಮಿಕ ನಂಬಿಕೆ ಜೊತೆ ಶೈಕ್ಷಣಿಕವಾಗಿ ಪ್ರತಿಯೊಬ್ಬರೂ ಮುಂದೆ ಬರಬೇಕು. ಮಂದಿರದ ಪರಿಸರದಲ್ಲಿ ಸಸಿ ನೆಟ್ಟು ವಾತಾವರಣ ಶುಚಿತ್ವವಾಗಿಟ್ಟುಕೊಂಡು ಭಕ್ತರಿಗೆ ಇದೊಂದು ನೆಮ್ಮದಿ ನೀಡುವ ತಾಣವಾಗಿ ಹೊರ ಹೊಮ್ಮಲಿ. ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಈ ಕ್ಷೇತ್ರಾಧಿಪತಿ ವಗ್ಗರಾಯಣ್ಣ ಮುತ್ಯಾಗಿದೆ. ಅವರ ಪವಾಡಗಳನ್ನು ಕೇಳಿದ್ದೇನೆ. ಅದರಂತೆ ಈ ಕ್ಷೇತ್ರದ ಸುತ್ತಮುತ್ತಲೂ ಉತ್ತಮ ವಾತಾವರಣ ಕಲ್ಪಿಸಿದ್ದಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಒಂದಿಷ್ಟು ಸಮಯ ಕ್ಷೇತ್ರದಲ್ಲಿ ಕಳೆದು ನೆಮ್ಮದಿಯಿಂದ ಮನೆಗೆ ತೆರಳುವಂತಾಗಬೇಕು. ಅದಕ್ಕೆ ಬೇಕಾದ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಪಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ನಗರದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ವಿವರ ನೀಡಿದ ಅವರು, ಮೂಲಭೂತ ಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಪ್ರತಿಯೊಂದು ವಾರ್ಡ್‌ ನಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳುವ ಕುರಿತು ಗಮನಕ್ಕೆ ತಂದರೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಕುರುಬ ಸಮಾಜದ ಯುವಕರು ಸಿದ್ಧಗೊಳಿಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ನಾಮಫಲಕ ಉದ್ಘಾಟಿಸಿದರು. ಬಡಾವಣೆ ವತಿಯಿಂದ ಶಾಸಕ ದರ್ಶನಾಪು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಗ್ಗರಾಯಣ್ಣ ಮುತ್ಯಾನ ಸನ್ನಿಧಾನದಲ್ಲಿ ವಿಶೇಷ ಪೂಜೆ ಅಲಂಕಾರ ಜರುಗಿತು. ಆಗಮಿಸಿದ ಜನರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಾಸಕರು ಸ್ಥಳೀಯ ಈಶ್ವರ ದೇವಸ್ಥಾನ ಮತ್ತು ಶ್ರೀ ರಾಘವೇಂದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

Advertisement

ಅಯ್ಯಪ್ಪ ಜಂಗಳಿ, ಅನಂತರಾವ ದೇಶಪಾಂಡೆ, ಶಿವು ಕುಮಾರ, ವಸಂತ ಸುರಪುರಕರ್‌, ಹಣಮಂತ್ರಾಯಗೌಡ ರಾಕಂಗೇರಾ, ಭೀಮರಾಯ ವಗ್ಗನೋರ, ನಾಗಪ್ಪ ವಗ್ಗನೋರ, ದ್ಯಾವಣ್ಣ ಮಾಸ್ತರ ಚಿಟ್ಟೆನೋರ, ಚಂದ್ರಾಮಪ್ಪ, ಹೈಯಾಳಪ್ಪ, ಹೊನ್ನಪ್ಪ ಪೂಜಾರಿ, ಯಲ್ಲಪ್ಪ ಪೂಜಾರಿ, ಸುಬ್ಬಣ್ಣ ಪೂಜಾರಿ, ರಾಯಪ್ಪ ಪೂಜಾರಿ, ಸಂಗಪ್ಪ, ಬಸವರಾಜ, ಅಯ್ಯಪ್ಪ ಪೂಜಾರಿ, ಸಾದಪ್ಪ ಪೂಜಾರಿ, ರಾಜಣ್ಣ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next