Advertisement

ಪುಸ್ತಕಗಳಿಂದ ಜ್ಞಾನ ಹೆಚ್ಚಳ

01:02 PM Aug 11, 2019 | Naveen |

ಶಹಾಪುರ: ವಿವಿಧ ಬಗೆಯ ಸಾಹಿತ್ಯ ಪ್ರಕಾರದ ಉತ್ತಮ ಪುಸ್ತಕಗಳನ್ನು ಓದುವುದರಿಂದ ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಜೊತೆಗೆ ಮನುಷ್ಯನ ಜ್ಞಾನ ಭಂಡಾರ ಹೆಚ್ಚಾಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.

Advertisement

ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ನಗರದ ಸುಮಿತ್ರಾ ಪಿ. ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದ ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವೊಮ್ಮೆ ಪುಸ್ತಕಗಳಿಂದ ತಮ್ಮ ಬದುಕನ್ನೆ ಬದಲಾವಣೆ ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಪುಸ್ತಕಗಳು ಕೆಲವರಿಗೆ ಧೈರ್ಯ ತುಂಬುತ್ತವೆ. ಸಾಧನೆ ಶಿಖರವೇರಲು ಪ್ರೇರಣೆ ನೀಡುತ್ತವೆ ಎಂದರು.

ಸಾಹಿತಿ ಚಂದ್ರಕಾಂತ ಕರದಳ್ಳಿ ಮಾತನಾಡಿ, ಪುಸ್ತಕಗಳು ವ್ಯಕ್ತಿಯ ಸಾಧನೆಯ ಪ್ರತೀಕಗಳಾಗಿವೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ವ್ಯಕ್ತಿತ್ವ ಬೆಳೆಸುವಂತಹ ಪುಸ್ತಕಗಳನ್ನು ಓದುವಂತೆ ಸಲಹೆ ನೀಡಬೇಕು ಎಂದರು.

ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡಿ, ಪುಸ್ತಕಗಳು ಮೌಲ್ಯಯುತ ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೆ, ಸುಸಂಸ್ಕೃತ ಬದುಕಿಗೆ ಸ್ಫೂರ್ತಿದಾಯಕ ಆಗಬಲ್ಲವು. ಕಾರಣ ಮಕ್ಕಳಿಗೆ ಚಿಕ್ಕಂದಿನಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂದು ತಿಳಿಸಿದರು.

Advertisement

ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆಯಲ್ಲಿ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ನಾಡಿನ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದಿ ಅದರ ಅಭಿಪ್ರಾಯ ವ್ಯಕ್ತಪಡಿಸಿದರು.

10ನೇ ತರಗತಿ ವಿದ್ಯಾರ್ಥಿ ಅರುಣ್‌, ಸಿದ್ದಣ್ಣ ಕುಂಬಾರ ರಚಿಸಿರುವ ಶಹಾಪುರದ ಪರಿಸರ ಶಾಸನಗಳು ಮತ್ತು ದೇವಾಲಯಗಳು ಪುಸ್ತಕದ ಕುರಿತು ಅಭಿಪ್ರಾಯ ಮಂಡಿಸಿ ಪ್ರಥಮ ಸ್ಥಾನ ಪಡೆದರೆ, ವಿದ್ಯಾರ್ಥಿನಿ ಸವಿತಾ ಜೀವಿಶಾಸ್ತ್ರಿ ಅವರು ರಚಿಸಿರುವ ಬೇಂದ್ರೆಯವರ ಬದುಕಿನ ಸಾರಾಂಶ ಕುರಿತು ಅಭಿಪ್ರಾಯ ಮಂಡಿಸಿ ದ್ವಿತೀಯ ಸ್ಥಾನ ಪಡೆದರು. ಇತರೆ ವಿದ್ಯಾರ್ಥಿಗಳು ಹಲವಾರು ಕೃತಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಡಾ| ಮೋನಪ್ಪ ಶಿರವಾಳ, ಬಸವರಾಜ ಸಿನ್ನೂರು, ಸಣ್ಣ ನಿಂಗಣ್ಣ ನಾಯ್ಕೋಡಿ, ರವೀಂದ್ರನಾಥ ಪತ್ತಾರ, ಶೈಲಜಾ ಪತ್ತಾರ ಉಪಸ್ಥಿತರಿದ್ದರು. ಶಾಲೆಯ ಮುಖ್ಯಗುರು ವೆಂಕಟೇಶರಾವ್‌ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಈರಮ್ಮ ಉಪಾಸೆ ಪ್ರಾರ್ಥಿಸಿದರು. ರೇಣುಕಾ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next