Advertisement

ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಸ್ಮರಣೀಯ

11:05 AM Jul 27, 2019 | Naveen |

ಶಹಾಪುರ: ನಮ್ಮ ರಾಷ್ಟ್ರದ ಸಂರಕ್ಷಣೆಗಾಗಿ ತಮ್ಮ ಬದುಕನ್ನು ಮುಡುಪಿಟ್ಟು ಹೋರಾಟ ಮಾಡುವ ಮೂಲಕ ದೇಶದ ಜೊತೆಗೆ ನಮ್ಮೆಲ್ಲರನ್ನು ಕಾಯುವ ಸೈನಿಕರ ಸೇವೆ ಅನನ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ತಿಳಿಸಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ, ಪೊಲೀಸ್‌ ಇಲಾಖೆ, ನಿಸರ್ಗ ವಿವಿಧೋದ್ದೇಶ ಸೇವಾ ಸಂಸ್ಥೆ ದೋರನಹಳ್ಳಿ ಮತ್ತು ಡಿಗ್ರಿ ಕಾಲೇಜು, ಪ್ರತೀಕ್ಷಾ ಶೀಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಳಿಸಗರ, ಛಾಯಾಚಿತ್ರಗಾರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ 20ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ವೀರಯೋಧರಿಗೆ ಗೌರವ ಸಮರ್ಪಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರ ತ್ಯಾಗ ಬಲಿದಾನಗಳನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ನೆನಪಿಸಿಕೊಳ್ಳಬೇಕು. ರಕ್ತ ಹೆಪ್ಪು ಗಟ್ಟುವ ಚಳಿಯಲ್ಲಿ ಕಾರ್ಗಿಲ್ನ ಪ್ರದೇಶದಲ್ಲಿ ನಮ್ಮ ದೇಶದ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿದ್ದ ವೈರಿಗಳೊಂದಿಗೆ ಭಯೋತ್ಪಾದಕ ಪಾತಾಕಿಗಳೊಡನೆ ಹೋರಾಟ ನಡೆಸುವ ವೀರ ವಿಜಯವನ್ನು ಒದಗಿಸಿಕೊಟ್ಟ ಸೈನಿಕರನ್ನು ನಾವೆಲ್ಲ ಸ್ಮರಿಸಲೇಬೇಕು ಎಂದರು.

ಯುವಕರು ಕಾನೂನು ಜ್ಞಾನ ಪಡೆಯುವ ಜೊತೆಗೆ ದೇಶ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಮೊದಲು ದೇಶ ಸೇವೆಗೆ ಆದ್ಯತೆ ನೀಡಬೇಕು. ದೇಶ ಉಳಿದಲ್ಲಿ ನಾವೆಲ್ಲ ಉಳಿಯುತ್ತೇವೆ. ಆದ್ದರಿಂದ ಯುವಕರು ದೇಶಾಭಿಮಾನವನ್ನು ಬೆಳೆಸಿಕೊಂಡು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳದೆ ರಾಷ್ಟ್ರದ ಏಕತೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವೀರ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ವಕೀಲ ಆರ್‌.ಎಮ್‌. ಹೊನ್ನರಡ್ಡಿ ಕಾನೂನು ಅರಿವು-ನೆರವು ಕುರಿತು ಉಪನ್ಯಾಸ ನೀಡಿದರು. ಮಲ್ಲಯ್ಯ ಪೋಲಂಪಲ್ಲಿ, ಎಸ್‌.ಬಿ. ನರಸನಾಯಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ| ವಿ.ಎಮ್‌. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

Advertisement

ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಲ್ಲಣ್ಣ ಎಸ್‌.ರಾಂಪೂರೆ, ಸಿಪಿಐ ಹನುಮರೆಡ್ಡೆಪ್ಪ, ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ ಮತ್ತು ಅರಣ್ಯ ಇಲಾಖೆಯ ಶ್ರೀಧರ ಯಕ್ಷಂತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next