Advertisement

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

04:01 PM Apr 27, 2024 | Team Udayavani |

ಶಹಾಪುರ: ಕಾಂಗ್ರೆಸ್ ಪಕ್ಷ ಎ ಟೂ ಝೆಡ್ ವರೆಗೂ ಇಂಗ್ಲೀಷ್ ವರ್ಣಮಾಲೆ ಹೆಸರಿನಡಿ ಮಾಡಿದ ಹಗರಣಗಳು ಸರಾಗವಾಗಿ ಹೆಸರಿಸಲಾಗಿದೆ. ಅಷ್ಟೊಂದು ಹಗರಣಗಳು ಮಾಡಿ ದೇಶದ ಸಂಪತ್ತು, ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಇಂತಹ ಬೃಹತ್ ಭ್ರಷ್ಟಾಚಾರದ ಪಕ್ಷಕ್ಕೆ ಏನಾದರೂ ಅಧಿಕಾರ ಕೊಟ್ಟರೆ ದೇಶದ ಸ್ಥಿತಿ ಅದೋಗತಿಯೇ ಗ್ಯಾರಂಟಿ ಎಂದು ಬಿಜೆಪಿ ಪ್ರಮುಖ ಬಸನಗೌಡ ಪಾಟೀಲ್ ಯತ್ನಾಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ರಾಯಚೂರ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಪರ ಪ್ರಚಾರ ಸಭೆ ಅಂಗವಾಗಿ ಬಿಜೆಪಿ ರೋಡ್ ಶೋ ನಡೆಸಿ ಬಸವೇಶ್ವರ ವೃತ್ತದಲ್ಲಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿದರು.

ಭ್ರಷ್ಟಾಚಾರ ಮುಕ್ತ, ಭಯೋತ್ಪಾಧನಾ ಮುಕ್ತ ಕಳಂಕ ರಹಿತ ಆಡಳಿತ ಮತ್ತು ದೇಶದ ಉನ್ನತೀಕರಣಕ್ಕೆ ಶ್ರಮಿಸುವ ಪ್ರಧಾನಿ ನರೇಂದ್ರ ಮೋದಿಜೀಯವರನ್ನು ಮತ್ತೊಮ್ಮೆ ನಾವು ಪ್ರಧಾನಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ದೇಶದ ಸುಭದ್ರತೆಗಾಗಿ, ಏಳ್ಗೆಗಾಗಿ ಬಿಜೆಪಿಗೆ ಮತ ನೀಡುವ ಮೂಲಕ ಸಹಕರಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಹೆಸರಿನಡಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಒಂದು ಕೈಯಿಂದ ದುಡ್ಡು ನೀಡಿದಂತೆ ಮಾಡಿ ಇನ್ನೊಂದಡೆ ದುಪ್ಪಟ್ಟು ಹಣ ದೋಚುವ ಕೆಲಸ ಮಾಡುತ್ತಿದೆ. ಮೋದಿಜೀ ಅವರು ವರ್ಷಕ್ಕೆ 6 ಸಾವಿರ ಧನ ಸಹಾಯ ಸೇರಿದಂತೆ ಯಡಿಯೂರಪ್ಪ ಸಿಎಂ ಇದ್ದಾಗ ರಾಜ್ಯದಿಂದ 4 ಸಾವಿರ ಸೇರಿ ವರ್ಷಕ್ಕೆ 10 ಸಾವಿರ ರೂ. ರೈತರ ಅಕೌಂಟ್‌ಗೆ ಹಾಕಲಾಗುತಿತ್ತು. ಆದರೆ ಸಿದ್ದರಾಮಯ್ಯ ಬಂದು ರಾಜ್ಯದ 4 ಸಾವಿರ ತೆಗೆದು ಹಾಕಿದ್ದಾರೆ ಎಂದರು.

Advertisement

ಆಸ್ತಿ ಲೂಟಿ ಮಾಡಲು ಹೊರಟ ಕಾಂಗ್ರೆಸ್: ಯತ್ನಾಳ ಕಿಡಿ

ಕಾಂಗ್ರೆಸ್ ಎರಡು ಕೆಟ್ಟ ಕಾನೂನು ಜಾರಿಗೆ ಸಿದ್ಧತೆ ಮಾಡಿಕೊಂಡಿದೆ. ಮೊದಲನೆಯದ್ದು ಆಸ್ತಿ ಕಸಿದುಕೊಳ್ಳುವುದು ಹೇಗೆ.? ಅಂದರೆ ಅಮೇರಿಕಾದಲ್ಲಿರುವ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.55 ರಷ್ಟು ಆಸ್ತಿ, ಸಂಪತ್ತನ್ನು ಕಸಿದುಕೊಂಡು ಹೆಚ್ಚು ಮಕ್ಕಳನ್ನು ಹೆತ್ತವರಿಗೆ ಅಂದರೆ ಯಾರು ಹೆಚ್ಚು ಮಕ್ಕಳನ್ನು ಹೆತ್ತವರು ಮುಸ್ಲಿಂರಿಗೆ ಹಂಚೋ ಕಾನೂನು ತರಲು ಕಾಂಗ್ರೆಸ್ ಮುಂದಾಗಿದೆ.

ಇನ್ನೊಂದು ಅಟ್ರಾಸಿಟಿ ಮಾದರಿ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೂ ಕೊಡುವ ಹುನ್ನಾರ ನಡೆಸಿದ್ದಾರೆ. ಅಂದರೆ ಅಲ್ಪಸಂಖ್ಯಾತರ ವಿರುದ್ಧ ಧ್ವನಿ ಎತ್ತದಿರಲಿ ಅವರನ್ನು ಕೆಂಗಣ್ಣಿನಿಂದ ನೋಡಿದರು ಒದ್ದು ಒಳಗಾಗುವಂಥ ವಿಶೇಷ ಕಾನೂನು ತರಲು ಹೊರಟಿದೆ ಎಂದು ಕಿಡಿಕಾರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ತಾಲೂಕು ಮಂಡಲ ಅಧ್ಯಕ್ಷ ರಾಜೂಗೌಡ ಉಕ್ಕಿನಾಳ, ನಗರ ಅಧ್ಯಕ್ಷ ದೇವಿಂದ್ರಪ್ಪ ಕೋನೇರ, ಪ್ರಮುಖ ಹಿರಿಯರಾದ ಡಾ.ಚಂದ್ರಶೇಖರ ಸುಬೇದಾರ, ಶಿವರಾಜ ದೇಶಮುಖ, ಬಸವರಾಜ ವಿಭೂತಿಹಳ್ಳಿ ಇತರರಿದ್ದರು.

ದೇಶದ ಹಿತ ದೃಷ್ಟಿ ಹಿನ್ನೆಲೆ ಮತ್ತೊಮ್ಮೆ ಮೋದಿ ಗೆಲುವಿಗೆ ನಾವೆಲ್ಲ ಶ್ರಮಿಸಬೇಕಿದೆ. ಆ ಹಿನ್ನೆಲೆಯಲ್ಲಿ ಮತ್ತೊಮ್ಮೆ ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡುವ ಮೂಲಕ ಮೋದಿಜೀಯವರ ಕೈ ಬಲಪಡಿಸಬೇಕೆಂದು ಬಿಜೆಪಿ ರಾಯಚೂರ ಲೋಕಸಭಾ ಕ್ಷೇತ್ರ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮನವಿ ಮಾಡಿದರು.

ಕಳೆದ ಬಾರಿ ಹೆದ್ದಾರಿ, ರೈಲು ಅಭಿವೃದ್ಧಿ ಸೇರಿದಂತೆ ಶಹಾಪುರ ಕ್ಷೇತ್ರದ ರಿಂಗ್ ರಸ್ತೆ ಹತ್ತು ಹಲವು ಕಾರ್ಯಗಳನ್ನು ಇನ್ನೂ ಆಗಬೇಕಿದೆ. ಅವುಗಳನ್ನು ಪೂರ್ಣವಾಗಿಸಲು ನನಗೆ ಮತ್ತೊಮ್ಮೆ ತಮ್ಮೆಲ್ಲರ ಶ್ರೀರಕ್ಷೆ ನೀಡಿ. ಮುಂದಿನ ಬಾರಿ ಯುವಕರಿಗೆ ಅವಕಾಶ ಮಾಡಿಕೊಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next