Advertisement

ಶಹಾಪುರ ನಗರ ಪೇದೆಗೆ ಕೋವಿಡ್ ಸೋಂಕು ಪಾಸಿಟಿವ್‌

11:48 AM Jun 06, 2020 | Naveen |

ಶಹಾಪುರ: ನಗರ ಠಾಣೆ ಕಾನ್ಸಟೇಬಲ್‌ (ಪಿ-ಸಂಖ್ಯೆ 4446) ಓರ್ವನಿಗೆ ಕೋವಿಡ್ ಪಾಸಿಟಿವ್‌ ದೃಢವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಭಗವಾನ ಸೊನಾವಣೆ ಶುಕ್ರವಾರ ಭೇಟಿ ನೀಡಿದರು.

Advertisement

ಈ ವೇಳೆ ಠಾಣೆಗೆ ಸ್ಯಾನಿಟೈಸ್‌ ಮಾಡಿಸಲಾಯಿತು. ಅಲ್ಲದೆ ಎಲ್ಲ ಪೊಲೀಸ್‌ ಸಿಬ್ಬಂದಿಯನ್ನು ಭೀಮರಾಯನಗುಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಗಂಟಲು ದ್ರವ ಮತ್ತು ರಕ್ತ ಮಾದರಿ ತೆಗೆದುಕೊಳ್ಳಲಾಗಿದೆ. ಕೂಡಲೇ ಪರೀಕ್ಷಾ ವರದಿ ನೀಡುವಂತೆ ಎಸ್‌ಪಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೋವಿಡ್‌ ಸೋಂಕಿತ ಕಾನ್ಸಟೇಬಲ್‌ ಸಂಪರ್ಕ ಕಾರ್ಯ ಪತ್ತೆ ನಡೆದಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿರುವವರ ಪಟ್ಟಿ ಮಾಡಲಾಗುತ್ತಿದೆ. ಈಗಾಗಲೇ ಸೋಂಕಿತ ಕಾನ್ಸಟೇಬಲ್‌ ಹೋಂ ಕ್ವಾರಂಟೈನ್‌ನಲ್ಲಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ನಿತ್ಯ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಕೊಳ್ಳೂರ(ಎಂ) ಗ್ರಾಮದ ಹತ್ತಿರದ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯ ನಿರತನಾಗಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next