Advertisement

ಶಹಾಪುರ ನಗರಸಭೆ ಚುನಾವಣೆ: ಶೇ. 61.69 ಮತದಾನ

03:08 PM May 30, 2019 | Naveen |

ಶಹಾಪುರ: ಮೇ 29ರಂದು ಇಲ್ಲಿನ ನಗರಸಭೆಯ 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು ಶೇ. 61.69ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್‌ ಸಂಗಮೇಶ ಜಿಡಗೆ ತಿಳಿಸಿದರು.

Advertisement

ಒಟ್ಟು 48,031 ಮತದಾರರನ್ನು ಹೊಂದಿದ್ದ ಶಹಾಪುರ ನಗರ, ಅದರಲ್ಲಿ 24,000 ಪುರುಷರು ಮತ್ತು 24,023 ಮಹಿಳಾ ಮತದಾರರನ್ನು ಹೊಂದಿತ್ತು. ನಿನ್ನೆ ನಡೆದ ಮತದಾನದಲ್ಲಿ 15,263 ಪುರುಷರು ಮತದಾನ ಮಾಡಿದರೆ, 14,366 ಮಹಿಳೆಯರು ಮತದಾನ ಮಾಡಿದ್ದಾರೆ. ಉಳಿದಂತೆ ವಿಕಲಚೇತನ ಮತ್ತು ಇತರೆ ಕಾಲಂ ಅಡಿ ಬರುವ ಮತದಾರಾರರು ಬೆರಳಣಿಕೆಯಷ್ಟಿತ್ತು. ಅದರಲ್ಲಿ ಯಾರೊಬ್ಬರು ಮತದಾನ ಮಾಡದಿರುವ ಕುರಿತು ಮಾಹಿತಿ ದೊರೆತಿದೆ.

ಉಳಿದಂತೆ ಒಟ್ಟು 29,629 ಜನ ಮತದಾನ ಮಾಡಿದ್ದಾರೆ. ಒಟ್ಟು 51 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಮತದಾನ ವೇಳೆ ಯಾವುದೇ ಗಲಾಟೆ ಸಮಸ್ಯೆ ಉಂಟಾಗಿರುವುದು ಕಂಡು ಬರಲಿಲ್ಲ. ಮರು ಮತದಾನ ನಡೆಯುವಂತೆ ಯಾವುದೇ ಘಟನೆಗಳು ಜರುಗಲಿಲ್ಲ. ಪ್ರತಿ ಮತಗಟ್ಟೆಯಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಆರೋಪ: ನಗರದಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಆಯಾ ಶಾಲೆಯಲ್ಲಿ ಮತಗಟ್ಟೆಗಳನ್ನು ತೆರಯಲಾಗಿತ್ತು. ಬೇಕಾದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಮತದಾರರನ್ನು ಸೆಳೆಯುವ ಯಾವುದೇ ವಿಶೇಷ ಮತಗಟ್ಟೆಗಳನ್ನು ತೆರೆದಿರುವುದು ಕಂಡು ಬರಲಿಲ್ಲ. ಮತದಾರರ ಸೆಳೆತಕ್ಕೆ ಜಿಲ್ಲಾಡಳಿತ ಯಾವುದೇ ಜಾಗೃತಿ, ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.

Advertisement

Udayavani is now on Telegram. Click here to join our channel and stay updated with the latest news.

Next