Advertisement
ಮಂಗಳವಾರ ನಗರದ ಪಾರ್ವತಿ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಈ ಸೋಲು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಸೋಲು. ದೇಶದ ಸ್ವಾತಂತ್ರ್ಯಕ್ಕಾಗಿ ಅಗಲಿ ಹೋದ ಆ ಮಹಾತ್ಮರ ಸೋಲು. ನನ್ನ ಸೋಲಿಗೆ ಕಾರಣವೇ ಇಲ್ಲ ಎಂದು ಹೇಳಿದರು.
Related Articles
Advertisement
ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಹೈದ್ರಾಬಾದ ಕರ್ನಾಟಕ ಭಾಗದ ಅಭಿವೃದ್ಧಿಯ ಶ್ರೀ ಮುಕುಟದಂತಿರುವ ಮಲ್ಲಿಕಾರ್ಜುನ ಸಾಹೇಬರು ಕೆಲಸ ಮಾಡಿದರೂ ಮತ ಹಾಕದೇ ಸೋಲಿಸಿದ್ದರಿಂದ ಅತೀವ ನಿರಾಸೆಯಾಗಿದೆ. ಯುವಕರು ಬಿಜೆಪಿ ಕಡೆಗೆ ಅರಿಯದೇ ವಾಲುತ್ತಿದ್ದಾರೆ. ಈ ಭಾಗದ ಎಷ್ಟೋ ಯುವಕರು 371(ಜೆ) ಕಲಂ ಅಡಿಯಲ್ಲಿ ಉಪಯೋಗ ತೆಗೆದುಕೊಂಡಿದ್ದಾರೆ. ಈ 371 (ಜೆ) ಕಲಂ ತಂದದ್ದು ಮಲ್ಲಿಕಾರ್ಜುನ ಖರ್ಗೆ ಎನ್ನುವುದನ್ನು ಯುವಕರು ಮರೆಯಬಾರದಿತ್ತು. ಯಾರು ಕೆಲಸ ಮಾಡಿದ್ದಾರೆಯೋ ಅವರಿಗೆ ಬೆಂಬಲ ನೀಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಕೆಲಸ ನೋಡಿ ಯಾರೂ ಅವರು ಸೋಲುತ್ತಾರೇ ಎಂದು ಊಹಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವಪ್ಪ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಗನ್ನಾಥ ಗೋಧಿ, ಸಿ.ಎ. ಪಾಟೀಲ, ದೇವೆಂದ್ರಪ್ಪ ಮರತೂರ, ಚಂದ್ರಿಕಾ ಪರಮೇಶ್ವರ, ಲತಾ ರಾಠೊಡ, ಸುಭಾಷ ರಾಠೊಡ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಅಜೀತ್ ಪಾಟೀಲ, ವಿಜಯಕುಮಾರ ಮುಟ್ಟತ್ತಿ, ಗಿರೀಶ ಕಂಬಾನೂರ, ಸುಭಾಷ ಪವಾರ, ಯಾಕೂಬ ಮರ್ಚಂಟ್, ಸುರೇಶ ನಾಯಕ, ಸಾಹೇಬಗೌಡ ಬೋಗುಂಡಿ, ಸುಭಾಷ ಪಂಚಾಳ ಹಾಗೂ ಮತ್ತಿತರರು ಇದ್ದರು. ಮೃತ್ಯಂಜಯ ಹಿರೇಮಠ ನಿರೂಪಿಸಿದರು, ಡಾ| ರಶೀದ ಮರ್ಚಂಟ್ ಸ್ವಾಗತಿಸಿದರು, ಡಾ| ಅಹ್ಮದ್ ಪಟೇಲ್ ವಂದಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಸಾಹಿತಿ ಗಿರೀಶ ಕಾರ್ನಾಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸುಳ್ಳಿಗೆ ಜಯ ಸಿಕ್ಕಿದೆ. ಜನರು ಸುಳ್ಳಿಗೆ ಮಣೆ ಹಾಕಿದ್ದಾರೆ. ಮೋಸದ ಗಾಳಿಗೆ ನಾವು ಸೋತಿರಬಹುದು. ಯಾವುದಕ್ಕೂ ಕಾರ್ಯಕರ್ತರು ಆತ್ಮವಿಶ್ವಾಸ ಕಳೆದುಕೊಳ್ಳದಿರಿ. ಧರ್ಮದ ಕಾಲ ಬಂದೇ ಬರುತ್ತದೆ.•ಅಲ್ಲಮ ಪ್ರಭು ಪಾಟೀಲ,
ಮಾಜಿ ವಿಧಾನ ಪರಿಷತ್ ಸದಸ್ಯ ವಿಚಾರವಂತ, ನಿಷ್ಠುರವಾದಿ ಗಿರೀಶ ಕಾರ್ನಾಡ ಪ್ರಗತಿಪರ ವಿಚಾರಧಾರೆ ಮೂಲಕ, ನಾಟಕ, ಸಿನಿಮಾ ರಂಗ ಮೂಲಕ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಶ್ರೀಮಂತಿಕೆಗೆ ಬಹುದೊಡ್ಡ ನಷ್ಟವಾಗಿದೆ. ಇಂತಹ ವಿಚಾರವಂತರು ಬೆಳೆದು ಬಂದರೆ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ. ಆದರಿಂದು ಇಂತಹ ವಿಚಾರಧಾರೆ ಮೇಲೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ.
•ಡಾ| ಮಲ್ಲಿಕಾರ್ಜುನ ಖರ್ಗೆ,
ಮಾಜಿ ಸಂಸದ