Advertisement

ಸಾಮಾಜಿಕ ಅಂತರ ಕಾಪಾಡಿಕೊಂಡ ವಿದ್ಯಾರ್ಥಿಗಳು

11:53 AM Jun 26, 2020 | Naveen |

ಶಹಾಬಾದ: ಕೋವಿಡ್ ಭೀತಿಯ ಕಾರಣದಿಂದ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆ ಗುರುವಾರ ನಗರದಲ್ಲಿ ಸುಲಲಿತವಾಗಿ ನಡೆಯಿತಾದರೂ, ವಿದ್ಯಾರ್ಥಿಗಳಲ್ಲಿ ಕೋವಿಡ್ ಭಯ ಎದ್ದು ಕಾಣುತ್ತಿತ್ತು.

Advertisement

ಪರೀಕ್ಷೆ ಮುಗಿಯುವವರೆಗೂ ಸಾಮಾಜಿಕ ಅಂತರ ಕಾಯ್ದುಕೊಂಡಂತಹ ವಿದ್ಯಾರ್ಥಿಗಳು, ಪರೀಕ್ಷೆ ಮುಗಿದ ನಂತರವೂ ಕೇಂದ್ರದ ಹೊರಗಡೆ ಬಂದು ಸಾಮಾಜಿಕ ಅಂತರ ಪಾಲಿಸಿದರು. ಇದಕ್ಕೆ ದೈಹಿಕ ಶಿಕ್ಷಕರು ಸಾಥ್‌ ನೀಡಿದರು. ಬೆಳಗ್ಗೆ ಪರೀಕ್ಷಾ ಸಮಯದ ವೇಳೆಗಿಂತಲೂ ಒಂದು ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದ ಬಳಿ ಬಂದು, ಪರೀಕ್ಷಾ ಕೋಣೆ ನೋಡಿಕೊಂಡರು. ಒಳಗೆ ಪ್ರವೇಶಿಸುವ ಎಲ್ಲ ವಿದ್ಯಾರ್ಥಿಗಳಿಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲು ಸೂಚಿಸಲಾಯಿತು.

ಆರು ಪರೀಕ್ಷಾ ಕೇಂದ್ರಗಳ ಸುಮಾರು 900ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರಿನಿಂಗ್‌ ಹಾಗೂ ಸ್ಯಾನಿಟೈಸ್‌ ಮಾಡಿ ಒಳಗೆ ಬಿಡಲಾಯಿತು. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆಯಾಗದಂತೆ ಕೆಎಸ್‌ಆರ್‌ ಟಿಸಿಯಿಂದ ಬಸ್‌ ವ್ಯವಸ್ಥೆ ಉಚಿತವಾಗಿ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ತಹಶೀಲ್ದಾರ್‌ ಸುರೇಶ ವರ್ಮಾ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next