Advertisement

ಕುಷ್ಠ ರೋಗ ನಿವಾರಣೆಗೆ ಕೈ ಜೋಡಿಸಿ

05:29 PM Jan 31, 2020 | Naveen |

ಬೀದರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮದಿನ, ವಿಶ್ವ ಕುಷ್ಠರೋಗ ದಿನಾಚರಣೆ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಗುರುವಾರ ನಗರದಲ್ಲಿ ವಾಹನ ರ್ಯಾಲಿ ನಡೆಸಿ, ಕುಷ್ಠರೋಗ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

Advertisement

ಸ್ಪರ್ಶ ಕುಷ್ಠರೋಗ ಕೈ ಕೈ ಜೋಡಿಸಿ ಕುಷ್ಠ ನಿವಾರಿಸಿ, ಕುಷ್ಠರೋಗದ ವಿರುದ್ಧ ಅಂತಿಮ ಯುದ್ಧ ಎಂಬ ಘೋಷಣೆಯೊಂದಿಗೆ ನಡೆದ ರ್ಯಾಲಿಯನ್ನು ಡಿಎಚ್‌ ಡಾ| ವೀರಣ್ಣಾ ರೆಡ್ಡಿ ಉದ್ಘಾಟಿಸಿ ಮಾತನಾಡಿ, ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಬಂಧಿಸಿದೆ. ದೇಹದ ಮೇಲೆ ಯಾವುದೇ ತರಹದ ಮಚ್ಚೆಗಳಿದ್ದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು. ರೋಗ ಕಂಡುಬಂದಲ್ಲಿ ಬಹುಔಷದಿ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದ್ದು, ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ರೋಗ ನಿವಾರಣೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ|ರಾಜಶೇಖರ ಪಾಟೀಲ ಮಾತನಾಡಿ, ಗಾಂಧೀಜಿ ಅವರ ಹುತಾತ್ಮದಿನದಂದು ರಾಷ್ಟ್ರೀಯ ಕುಷ್ಠರೋಗ ದಿನ ಆಚರಿಸಲಾಗುತ್ತಿದೆ. ಎಲ್ಲರೂ ಸೇರಿ ಭಾರತವನ್ನು ಕುಷ್ಠರೋಗ ಮುಕ್ತ ಮಾಡಲು ಪ್ರತಿಜ್ಞೆ ಸ್ವೀಕರಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಸಂಗಮೆಶ ಕಾಂಬಳೆ ಮಾತನಾಡಿ, ಗಾಂ ಧೀಜಿ ಅವರ
ಹುತಾತ್ಮರಾದ ದಿನದಂದು, ತಮ್ಮ ಕುಟುಂಬ ನೆರೆ-ಹೊರೆ ಹಾಗೂ ಸಮುದಾಯದಲ್ಲಿ ಕುಷ್ಠರೋಗಿಗಳು ಕಂಡು ಬಂದಲ್ಲಿ, ಅಂಥವರಿಗೆ ಆರೋಗ್ಯ ಇಲಾಖೆಯಲ್ಲಿ ಸಿಗುವ ಉಚಿತ ಚಿಕಿತ್ಸೆ ಸೌಲಭ್ಯ ತಲುಪಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇದೇ ವೇಳೆ “ಕುಷ್ಠರೋಗಿಗಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಅವರ ಆತ್ಮಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ. ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಬದ್ಧನಾಗಿರುತ್ತೇನೆ. ಹಾಗೂ ಕುಷ್ಠರೋಗಿಗಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು
ಅವಕಾಶ ಮಾಡಿಕೊಡುತ್ತೇನೆ. ಕುಷ್ಠರೋಗ ಸಂಪೂರ್ಣ ಗುಣಪಡಿಸಬಹುದಾದ ರೋಗ ಎಂಬ ಮಾಹಿತಿಯನ್ನು ಸಮಾಜದಲ್ಲಿ ನೀಡುತ್ತೇನೆ.

Advertisement

ಮಹಾತ್ಮ ಗಾಂಧೀಜಿ ಅವರ ಕನಸಾದ ಕುಷ್ಠರೋಗ ಮುಕ್ತ ಭಾರತ ಕಟ್ಟಲು ಕಾಯಾ, ವಾಚಾ ಮನಸಾ ಶ್ರಮಿಸುತ್ತೇನೆ’ ಎಂದು ಪ್ರತಿಜ್ಞೆ ಬೋ ಧಿಸಿದರು. ಕಾರ್ಯಕ್ರಮ ಅಧಿಕಾರಿ ಡಾ|ಕೃಷ್ಣಾರೆಡ್ಡಿ, ಕಚೇರಿಯ ಮೇಲ್ವಿಚಾರಕ ವೀರಶೆಟ್ಟಿ ಚನ್ನಶೆಟ್ಟಿ, ಆರೋಗ್ಯ ಶಿಕ್ಷಣ ಅ ಧಿಕಾರಿಗಳಾದ ಮೋಹನದಾಸ, ಶ್ರಾವಣ ಜಾಧವ ಓಂಕಾರ ಮಲ್ಲಿಗೆ, ಪ್ರಥಮ ದರ್ಜೆ ಸಹಾಯಕ ರಾಜೇಶ, ಸಿಬ್ಬಂದಿ ಗೋರಖನಾಥ, ಶಾಂತಪ್ಪಾ, ಟಿ.ಎಂ. ಮಚ್ಚೆ, ಜಾವಿದ್‌, ಮನೋಹರ, ಅರುಣಕುಮಾರ, ಸಂಗಶೆಟ್ಟಿ, ಶಾಮರಾವ್‌, ಅಬ್ದುಲ ಹೈ, ರಮೇಶ ಇಮಾನುವೇಲ್‌, ಲೈಕುದ್ದಿನ್‌, ಸಂಗಮೇಶ, ಪರಶುರಾಮ್‌ ಸಿಮಪ್ಪಾ, ರೆಣುಕಾ ತಾಂದಳೆ, ಜ್ಯೋತಿ, ಅಶ್ವಿ‌ನಿ, ಭ್ರಮಾರಂಭಾದೇವಿ, ರವಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next