ಶಹಾಬಾದ: ಶತಮಾನಗಳಿಂದ ಬ್ರಿಟಿಷರ ದಾಸ್ಯದಿಂದ ಬಳಲಿದ ಭಾರತಕ್ಕೆ ತ್ಯಾಗ, ಬಲಿದಾನ ನೀಡುವುದರ ಮೂಲಕ ನಮಗೆ ಸ್ವಾತಂತ್ರ್ಯ ಕಲ್ಪಿಸಿದ ಮಹಾನ್ ಹೋರಾಟಗಾರರನ್ನು ಸ್ಮರಿಸುವ ವಿಶೇಷ ದಿನವೇ ಸ್ವಾತಂತ್ರ್ಯ ದಿನವಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಗುರುವಾರ ತಾಲೂಕಾಡಳಿತ ವತಿಯಿಂದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಲು ಗಾಂಧಿಧೀಜಿ, ಭಗತ್‌ಸಿಂಗ್, ಲಾಲಬಹಾದ್ದೂರ ಶಾಸ್ತ್ರೀ, ಚಂದ್ರಶೇಖರ ಆಜಾದ್, ಸುಭಾಶ್ಚಂದ್ರಭೋಸ್ ಅವರಂತ ಅಸಂಖ್ಯ ಮಹನೀಯರು ತಮ್ಮ ವೈಯಕ್ತಿಕ ಬದುಕಿನ ಸಂತೋಷಗಳನ್ನು ತ್ಯಾಗ ಮಾಡಿದರು. ಬ್ರಿಟಿಷರ ವಿರುದ್ಧ ಉಗ್ರ ಹೋರಾಟದ ಮೂಲಕ ಇತಿಹಾಸ ಬರೆದರು. ನಮಗೆ ದೇಣಿಗೆಯಾಗಿ ಕೊಟ್ಟ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಸಾಗಿಸಬೇಕಾಗಿದೆ ಎಂದರು.
ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ದೇಶದ ಅತಿ ದೊಡ್ಡ ಹಬ್ಬ. ಮಹಾತ್ಮ ಗಾಂಧಿಧೀಜಿ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯ ದೇಶದ ಜನ ಸಮುದಾಯ ಅಭಿವೃದ್ಧಿ, ಭಾವೈಕ್ಯತೆ ಮತ್ತು ನೆಮ್ಮದಿ ಬದುಕಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದುಪಡಿಸುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪಿ.ಎಂ. ಸಜ್ಜನ್, ಪೌರಾಯುಕ್ತ ವೆಂಕಟೇಶ, ಡಿವೈಎಸ್‌ಪಿ ಕೆ. ಬಸವರಾಜ, ಪಿಐ ಕಪಿಲ್ದೇವ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಮೋದ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್, ಮುಖಂಡರಾದ ನಾಗರಾಜ ಮೇಲಗಿರಿ, ಅಣವೀರ ಇಂಗಿನಶೆಟ್ಟಿ, ಶೇರ ಅಲಿ, ದೇವೆಂದ್ರ ಕಾರೊಳ್ಳಿ, ಸುರೇಶ ಚವ್ಹಾಣ ಇದ್ದರು.