Advertisement

ಶಹಾಬಾದ್: ಕಾಗಿಣಾ ನದಿಗೆ ಬಿದ್ದ ಬಸ್; 40 ಮಂದಿಗೆ ಗಂಭೀರ ಗಾಯ

04:38 PM Nov 03, 2022 | Team Udayavani |

ವಾಡಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಿತ್ತಾಪುರ ತಾಲೂಕು ಸಾರಿಗೆ ಘಟಕಕ್ಕೆ ಸೇರಿದ್ದ ಬಸ್ ಶಹಾಬಾದ್ ಕಾಗಿಣಾ ನದಿಗೆ ಬಿದ್ದಿದ್ದು, ಬಸ್ಸಿನಲ್ಲಿದ್ದ ಸುಮಾರು 40 ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಜೇವರ್ಗಿ ದಿಂದ ಶಹಾಬಾದ್ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಬಸ್, ಕಿರಿದಾದ ಕಾಗಿಣಾ ಸೇತುವೆ ಮೇಲೆ ಆಯತಪ್ಪಿ ಉರುಳಿ ಬಿದ್ದಿದೆ. ಸೇತುವೆಯ ಮಧ್ಯದಲ್ಲಿ ಬಿದ್ದಿದ್ದರೆ ಭಾರಿ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಬಸ್ ಸೇತುವೆ ಹತ್ತುವಾಗಲೇ ಬಲ ಭಾಗದ ಹೊಲದಲ್ಲಿ ಉರುಳಿ ಬಿದ್ದ ಪರಿಣಾಮ ಪ್ರಾಣಾಪಾಯ ತಪ್ಪಿದೆ.

ಬಸ್ಸಿನೊಳಗಿದ್ದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರ ಬಂದಿದ್ದಾರೆ. ಸ್ಥಳದಲ್ಲಿದ್ದ ವಿವಿಧ ವಾಹನಗಳ ಸಾರ್ವಜನಿಕರು ಪ್ರಯಾಣಿಕರ ನೆರವಿಗೆ ಬಂದಿದ್ದಾರೆ. ಶಹಾಬಾದ್ ಮೂಲದ ಬಸ್ ಚಾಲಕ ಶಂಕರ ಮತ್ತು ನಿರ್ವಾಹಕ ಶ್ರೀನಿವಾಸ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಹಾಬಾದ್ ಸಿಪಿಐ ರಾಘವೇಂದ್ರ ಎಸ್, ಪಿಎಸ್ ಐ ಅಶೋಕ ಪಾಟೀಲ ಹಾಗೂ ಸಿಬಂದಿ ಗಾಯಾಳುಗಳನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಪಲ್ಟಿ ಹೊಡೆಯಲು ನಿಖರವಾದ ಕಾರಣ ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next