Advertisement

ಹಾಲಿವುಡ್‌ ಸಿನಿಮಾ ಜೊತೆ ʼಜವಾನ್‌ʼ ಟ್ರೇಲರ್‌ ರಿಲೀಸ್:‌ ಥ್ರಿಲ್‌ ಆದ ಶಾರುಖ್ ಪ್ಯಾನ್ಸ್

01:37 PM Jul 03, 2023 | Team Udayavani |

ಮುಂಬಯಿ: ʼಪಠಾಣ್‌ʼ ಸಿನಿಮಾದ ಬಳಿ ಶಾರುಖ್‌ ಖಾನ್‌ ಹಿಟ್‌ ಸಾಲಿನಲ್ಲಿ ನಿಂತಿದ್ದಾರೆ. ಈ ಬಾರಿ ಅವರ ಮತ್ತೊಂದು ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ʼಜವಾನ್‌ʼ ಗಾಗಿ ಫ್ಯಾನ್ಸ್‌ ಗಳು ಕಾತರದಿಂದ ಕಾಯುತ್ತಿದ್ದಾರೆ.

Advertisement

ʼಜವಾನ್‌ʼ ಸಿನಿಮಾ ಸಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಾಲಿವುಡ್‌ ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿರುವ ಸಿನಿಮಾದ ಪೋಸ್ಟರ್ ಹೈಪ್‌ ಕ್ರಿಯೇಟ್‌ ಮಾಡಿದೆ. ಇದೀಗ ಸಿನಿಮಾದ ಟ್ರೇಲರ್‌ ನತ್ತ ಪ್ರೇಕ್ಷಕರು ಗಮನ ಹರಿಸಿದ್ದು, ಸಿನಿಮಾದ ಟ್ರೇಲರ್‌ ರಿಲೀಸ್‌ ಡೇಟ್‌ ಹೊರಬಿದ್ದಿದೆ.

ʼಜವಾನ್‌ʼ ಸಿನಿಮಾದ ಮ್ಯೂಸಿಕ್‌ ರೈಟ್ಸ್‌ 36 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನುವ ಹಾಟ್‌ ಟಾಪಿಕ್‌ ಚರ್ಚೆಯಲ್ಲಿರುವಾಗಲೇ ಇದೀಗ ಸಿನಿಮಾದ ಟ್ರೇಲರ್‌ ಹಾಲಿವುಡ್‌ ಸಿನಿಮಾದ ಜೊತೆಯೇ ರಿಲೀಸ್‌ ಆಗಲಿದೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.

ಟಾಮ್ ಕ್ರೂಸ್ ಅವರ ಹಾಲಿವುಡ್‌ ನ ಬಹು ನಿರೀಕ್ಷಿತ ಸಿನಿಮಾದಲ್ಲಿ ಒಂದಾಗಿರುವ ʼಮಿಷನ್ ಇಂಪಾಸಿಬಲ್ 7ʼ ಸಿನಿಮಾದ ಮಧ್ಯಂತರದಲ್ಲಿ ʼಜವಾನ್‌ʼ ಸಿನಿಮಾದ ಮೊದಲ ಟ್ರೈಲರ್ ಥಿಯೇಟರ್‌ ನಲ್ಲೇ  ರಿಲೀಸ್‌ ಆಗಲಿದೆ ಎಂದು ವಿವಿಧ ವೆಬ್‌ ಸೈಟ್‌ ಗಳು ವರದಿ ಮಾಡಿದೆ. ಹಾಗೂ ಟ್ವೀಟ್‌ ಗಳು ವೈರಲ್‌ ಆಗಿವೆ.

ಇದನ್ನೂ ಓದಿ: Pan India: ನಂದ ಕಿಶೋರ್-‌ ಮೋಹನ್‌ ಲಾಲ್ ʼವೃಷಭʼಕ್ಕೆ ಏಕ್ತಾ ಕಪೂರ್‌ ಸಾಥ್; ಬಜೆಟ್‌ ಎಷ್ಟು?

Advertisement

ಅಂದಹಾಗೆ ʼ ʼಮಿಷನ್ ಇಂಪಾಸಿಬಲ್ 7ʼ ಸಿನಿಮಾ ಜು.7 ರಂದು ತೆರೆಗೆ ಬರಲಿದೆ.

ʼಜವಾನ್‌ʼ ನಲ್ಲಿ ಶಾರುಖ್‌ ಖಾನ್‌ ಜೊತೆಗೆ ನಯನತಾರಾ, ವಿಜಯ್‌ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು, ಸುನೀಲ್‌ ಗ್ರೋವರ್‌, ಸಾನ್ಯಾ ಮಲ್ಹೋತ್ರಾ ಸೇರಿದಂತ ಹಲವು ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ.

ದೀಪಿಕಾ ಪಡುಕೋಣೆ, ಸಂಜಯ್‌ ದತ್‌ ಮತ್ತು ವಿಜಯ್‌ ಅತಿಥಿ ಕಲಾವಿದರಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರ ಸೆಪ್ಟೆಂಬರ್‌ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್‌ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರ ವನ್ನು ಶಾರುಖ್‌ ಖಾನ್‌ ಅವರ ಪತ್ನಿ ಗೌರಿ ಖಾನ್‌ ನಿರ್ಮಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next