ಮುಂಬಯಿ: ಶಾರುಖ್ ಖಾನ್ 2023 ರ ಆರಂಭದಲ್ಲಿ ʼಪಠಾಣ್ʼ ಮೂಲಕ ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಕೊಟ್ಟಿದ್ದಾರೆ. 990 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾ 1000 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.
ಬಹು ಸಮಯದ ಬಳಿಕ ಶಾರುಖ್ ಖಾನ್ ಬಣ್ಣ ಹಚ್ಚಿದ್ದು, ಶಾರುಖ್ ಫ್ಯಾನ್ಸ್ ಗಳು ಸೇರಿದಂತೆ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂರೊಂದಿಗೆ ಶಾರುಖ್ ರನ್ನು ನೋಡಿ, ಚಿತ್ರ ಮಂದಿರದಲ್ಲಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ಸಿನಿಮಾ ಸ್ಪೈ ಕಥಾಹಂದರವನ್ನು ಒಳಗೊಂಡಿದೆ. ಶಾರುಖ್ ಖಾನ್ ಆಗಾಗ ಟ್ವಿಟರ್ ನಲ್ಲಿ #AskSRK ಮೂಲಕ ಫ್ಯಾನ್ಸ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
15 ನಿಮಿಷದಲ್ಲಿ ಫ್ಯಾನ್ಸ್ ಗಳು ಕೇಳುವ ಪ್ರಶ್ನೆಗೆ ಉತ್ತರಿಸುತ್ತಾರೆ. ಅಭಿಯೊಬ್ಬ ಶಾರುಖ್ ಬಳಿ ʼಪಠಾಣ್ʼ ನಲ್ಲಿ ಯಾವ ಸೀನ್ ಮಾಡಲು ಸವಾಲಾಯಿತು ಎಂದು ಕೇಳಿದ್ದಾರೆ.
Related Articles
ಇದನ್ನೂ ಓದಿ: ಎರಡು ಪಂದ್ಯ ಸೋತ ಆಸೀಸ್ ಗೆ ಮತ್ತೊಂದು ಆಘಾತ; ಗಾಯಗೊಂಡು ಕೂಟದಿಂದಲೇ ಹೊರಬಿದ್ದ ವೇಗಿ
ಇದಕ್ಕೆ ಶಾರುಖ್ ಅವರು, ಶರ್ಟ್ ತೆಗೆದು ಸಿಕ್ಸ್ ಪ್ಯಾಕ್ ಅಂದರೆ ದೇಹ ತೋರಿಸುವ ಸೀನ್ ಚಿತ್ರೀಕರಿಸುವಾಗ ನಾಚಿಕೆ ಆಗುತ್ತಿತ್ತು ಅದರೊಂದಿಗೆ ತುಂಬಾ ಚಳಿಯೂ ಆಗುತ್ತಿತ್ತು. ಇದನು ಚಿತ್ರೀಕರಿಸುವುದು ಸವಾಲಾಗಿತ್ತು ಎಂದಿದ್ದಾರೆ.
ನನ್ನ ಬಳಿ ಯಾವುದೇ ದುಬಾರಿ ಕಾರುಗಳಿಲ್ಲ ಎಂದು ಪ್ರಶ್ನೆಯೊಂದಿಗೆ ಶಾರುಖ್ ಉತ್ತರಿಸಿದ್ದಾರೆ. ನನ್ನ ಬಳಿ ತುಂಬಾ ಸಾಕುಪ್ರಾಣಿಗಳಿವೆ ಆದರೆ ಅವುಗಳ ಫೋಟೋಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಿಲ್ಲ. ಅವು ನನಗಿಂತ ಖ್ಯಾತಿ ಆಗುವುದು ನನಗೆ ಇಷ್ಟವಿಲ್ಲ ಎಂದು ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ. ನಿಮ್ಮ ನಿವೃತ್ತಿ ಬಳಿಕ ಯಾರೂ ದೊಡ್ಡ ಸ್ಟಾರ್ ಆಗಿ ನಿಮ್ಮ ಪ್ರಕಾರ ಬರಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿ, ನಾನು ನಟನೆಯಿಂದ ಎಂದಿಗೂ ನಿವೃತ್ತಿಯಾಗುವುದಿಲ್ಲ ನನ್ನನ್ನು ಕೆಲಸದಿಂದ ತೆಗೆದು ಹಾಕಬೇಕಾಗುತ್ತದೆ. ಒಂದು ವೇಳೆ ಹಾಗೆ ಆದರೆ ನಾನು ಮತ್ತಷ್ಟು ಹಾಟ್ ಆಗಿ ಬರುತ್ತೇನೆ ಎಂದಿದ್ದಾರೆ.
ಅಭಿಮಾನಿಯೊಬ್ಬರ ʼಪಠಾಣ್ -2ʼ ಸಿನಿಮಾ ಯಾವಾಗ ಬರುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಶಾರುಖ್ ಖಾನ್ ʼಪಠಾಣ್ -2ʼ ಅಲ್ಲ ನನ್ನ ಪ್ರತಿಯೊಂದು ಪ್ರಾಜೆಕ್ಟ್ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇನೆ. ಸತ್ಯ ತಿಳಿಯುವರೆಗೆ ಕಾಯುತ್ತೀರಿ ತಾಳ್ಮೆಯಿಂದ ಇರಿ. ಯಾವುದೇ ಗಾಸಿಪ್ ಗಳನ್ನು ನಂಬಬೇಡಿ ಎಂದಿದ್ದಾರೆ.
ಸಿಕ್ ಪ್ಯಾಕ್ ಲುಕ್ ನಲ್ಲಿ ಶಾರುಖ್ ʼಪಠಾಣ್ʼ ನಲ್ಲಿ ಸ್ಟೈಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಟ್ಲಿ ನಿರ್ದೇಶನದ ʼಜವಾನ್ʼ ಸಿನಿಮಾದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ.