Advertisement

ಶಬರಿಮಲೆ: ಕ್ಷೇತ್ರಕ್ಕೆ ಆಗಮಿಸಿದ ತಿರುವಾಭರಣಂ

09:23 AM Jan 16, 2020 | sudhir |

ಶಬರಿಮಲೆ: ಪುರಾಣ ಪ್ರಸಿದ್ಧ ಕ್ಷೇತ್ರ ಕೇರಳದ ಶಬರಿಮಲೆ ಕ್ಷೇತ್ರಕ್ಕೆ ಮಕರಸಂಕ್ರಮಣ ವಿಶೇಷ ದೀಪಾರಾಧನೆಗಾಗಿ ಪಂದಳ ಅರಮನೆಯಿಂದ ಜ.13ರಂದು ಮೆರವಣಿಗೆಯಿಂದ ಹೊರಟ ತಿರುವಾಭರಣಂ ಗಳನ್ನು ಹೊತ್ತ ಪೆಟ್ಟಿಗೆ ಶಬರಿಮಲೆ ಸನ್ನಿದಾನಕ್ಕೆ ಬುಧವಾರ ಸಂಜೆ 6.40ರ ಹೊತ್ತಿಗೆ ಆಗಮಿಸಿತು.

Advertisement

ಈ ಸಂದರ್ಭದಲ್ಲಿ ಅಯ್ಯಪ್ಪ ಭಕ್ತರ ಶರಣುಘೋಷ ಮುಗಿಲು ಮುಟ್ಟಿತು.ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷ ಇಡೀ ಸನ್ನಿಧಾನದಲ್ಲಿ ಮೊಳಗಿತು.

ಪಂಪಾಕ್ಕೆ ಆಗಮಿಸಿದ ತಿರುವಾಭರಣಂ ವನ್ನು ಪಂದಳ ಅರಮನೆಯ ರಾಜಪ್ರತಿನಿಧಿಗಳ ಅನುಮತಿಯೊಂದಿಗೆ ನೀಲಿಮಲೆ ಬೆಟ್ಟ ಏರಲಾಯಿತು.

ಶರಂಕುತ್ತಿಯಲ್ಲಿ ತಿರುವಾಂಕೂರು ದೇವಸ್ವಂ ಬೋರ್ಡ್ ನ ಪ್ರತಿನಿಧಿಗಳು ತಿರುವಾಭರಣಂನ ಮೆರವಣಿಗೆಯನ್ನು ಸ್ವಾಗತಿಸಿ ಸನ್ನಿಧಾನಕ್ಕೆ ಕರೆತರಲಾಯಿತು.

ಪಂದಳ ಅರಮನೆಯಿಂದ ತಂದ ತಿರುವಾಭರಣಗಳನ್ನು ಶಬರಿಮಲೆ ಸ್ವಾಮಿ ಅಯ್ಯಪ್ಪನಿಗೆ ಅಲಂಕಾರ ಮಾಡಲಾಗುತ್ತದೆ.

Advertisement

ವರ್ಷದಲ್ಲಿ ಒಂದು ಬಾರಿ ಮಾತ್ರ ಮಕರ ಸಂಕ್ರಾಂತಿಯಂದು ಅಯ್ಯಪ್ಪನಿಗೆ ಈ ತಿರುವಾಭರಣಗಳಿಂದ ಅಲಂಕರಿಸುತ್ತಾರೆ. ಪೂಜನೀಯವಾದ ಈ ಆಭರಣಗಳು ಪಂದಳರಾಜನು ತಮ್ಮ ವಂಶಸ್ಥನಾದ ಅಯ್ಯಪ್ಪನಿಗೆ ಪ್ರೀತಿಯಿಂದ ಮಾಡಿಸಿದ ಒಡವೆಗಳಾಗಿವೆ.

ಇದನ್ನು ಸಂಕ್ರಾಂತಿಯಂದು ಅಯ್ಯಪ್ಪ ಸನ್ನಿಧಾನಕ್ಕೆ ತೆಗೆದುಕೊಂಡು ಹೋಗುವ ಹಾಗೂ ಅಲ್ಲಿಂದ ಮರಳಿ ಅರಮನೆಗೆ ತಲುಪಿಸುವ ಜವಾಬ್ದಾರಿಯೂ ಈ ಪಂದಳ ಮನೆತನದವರದೇ ಆಗಿರುತ್ತದೆ.

ಇರುಮುಡಿ ಇಲ್ಲದಿದ್ದರೂ ಹದಿನೆಂಟು ಮೆಟ್ಟಲನ್ನು ಹತ್ತುವ ಅವಕಾಶ ಪಂದಳ ರಾಜಮನೆತನಕ್ಕೆ ಮಾತ್ರ ಇದೆ.

ಮೂರು ಆಭರಣಗಳ ಪೆಟ್ಟಿಗೆಯಲ್ಲಿ ಒಂದು ಅಯ್ಯಪ್ಪನ ಆಭರಣದ ಪೆಟ್ಟಿಗೆಯಾದರೆ ಇನ್ನೆರಡು ಪೆಟ್ಟಿಗೆಯಲ್ಲಿ ಮಾತೆಯ ಆಭರಣಗಳಿರುತ್ತದೆ.

– ಪ್ರವೀಣ್ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next