ನವದೆಹಲಿ:ಬಾಲಿವುಡ್ ನ ಶಬಾನಾ ಅಜ್ಮಿ, ಜಾವೇದ್ ಅಖ್ತರ್ ಮತ್ತು ನಾಸಿರುದ್ದೀನ್ ಷಾ ತುಕಡೆ, ತುಕಡೆ ಗ್ಯಾಂಗ್ ನ ಸ್ಲೀಪರ್ ಸೆಲ್ಸ್ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಮೋದಿಯಂತಹ ರಾಷ್ಟ್ರಭಕ್ತನನ್ನು ಪಡೆದಿದ್ದು ನಮ್ಮ ಪುಣ್ಯ: ಕೆ.ಎಸ್.ಈಶ್ವರಪ್ಪ
ಸಂದರ್ಶನದಲ್ಲಿ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಆರೋಪಿಗಳನ್ನು ಬಿಡುಗಡೆ ಮಾಡಿದ ಕುರಿತು ಶಬಾನಾ ಅಜ್ಮಿ ಅವರನ್ನು ಪ್ರಶ್ನಿಸಿದ್ದ ಸಂದರ್ಭದಲ್ಲಿ ಕುಸಿದು ಬಿದ್ದ ಘಟನೆಯ ನಂತರ ಸಚಿವ ಮಿಶ್ರಾ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.
ಸ್ಲೀಪರ್ ಸೆಲ್ಸ್ ಗಳಾದ ಶಬಾನಾ ಅಜ್ಮಿ, ಜಾವೇದ್ ಅಖ್ತರ್ ಮತ್ತು ನಾಸಿರುದ್ದೀನ್ ಷಾ ರಾಜಸ್ಥಾನದಲ್ಲಿ ಕನ್ನಯ್ಯ ಲಾಲ್ ಶಿರಚ್ಛೇದನ ಮಾಡಿದ್ದ ಸಂದರ್ಭದಲ್ಲಿ ಯಾವ ಹೇಳಿಕೆಯನ್ನೂ ನೀಡಿರಲಿಲ್ಲ. ಜಾರ್ಖಂಡ್ ನಲ್ಲಿ ನಡೆದ ಘಟನೆ ಬಗ್ಗೆ ತುಟ್ಟಿಬಿಚ್ಚಲಿಲ್ಲ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಏನೇ ಘಟನೆ ನಡೆದರೂ ಇವರು ಹೇಳಿಕೆಯನ್ನು ನೀಡುತ್ತಾರೆ ಎಂದು ಮಿಶ್ರಾ ಹೇಳಿದರು.
ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಏನಾದರು ಸಂಭವಿಸಿದಾಗ ಇವರಿಗೆ ದೇಶದಲ್ಲಿ ವಾಸವಾಗಿರಲು ಭಯವಾಗುತ್ತದೆ. ನಂತರ ಪ್ರಶಸ್ತಿ ವಾಪಸ್ ನೀಡುವ ಗ್ಯಾಂಗ್ ಕೂಡಾ ಸಕ್ರಿಯವಾಗುವ ಮೂಲಕ ಉಸಿರು ಹೊರಗೆ ಬಿಡುತ್ತಾರೆ. ಇವರೆಲ್ಲಾ ತಾವು ಜಾತ್ಯಾತೀತರು ಎಂದು ಹೇಗೆ ಹೇಳಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.