Advertisement
ಹಿಂದಿನ ನಿಯಮವೇನಿತ್ತು?2011ರಲ್ಲಿ ಕೇಂದ್ರ ಪರಿಸರ ಇಲಾಖೆಯಿಂದ ಪ್ರಕಟವಾಗಿದ್ದ ನಿಯಮಾವಳಿಗಳ ಪ್ರಕಾರ, ಇಎಸ್ ಝೆಡ್ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಬಫರ್ ವಲಯಗಳೆಂದು ಗುರುತಿಸಲಾಗಿತ್ತು. ಆ ವಲಯಗಳಲ್ಲೂ ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ಕೊಡಬೇಕೆಂದು ಸೂಚಿಸಲಾಗಿತ್ತು. ಅದಕ್ಕೂ ಮುನ್ನ 2002ರಲ್ಲಿ ಪ್ರಕಟಿಸಲಾಗಿದ್ದ ವನ್ಯಜೀವಿ ಸಂರಕ್ಷಣ ನಿಯಮಾಳಿಗಳಲ್ಲಿಯೂ ಇಎಸ್ ಝೆಡ್ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಬಫರ್ ವಲಯವೆಂದು ಗುರುತಿಸುವಂತೆ ಸೂಚಿಸಲಾಗಿತ್ತು. 2006ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿ, 2002ರ ವನ್ಯಜೀವಿ ಸಂರಕ್ಷಣ ನಿಯಮಾವಳಿಗಳನ್ನು ಎಲ್ಲಾ ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಅನುಸರಿಸಬೇಕೆಂದು ಸೂಚಿಸಿತ್ತು.