Advertisement

ಲೈಂಗಿಕ, ಮಾನಸಿಕ ಕಿರುಕುಳ: ಮಹಿಳೆಯಿಂದ ದೂರು

09:34 PM Mar 07, 2023 | Team Udayavani |

ಮಂಗಳೂರು: ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಮಂಗಳೂರಿನ ಕಚೇರಿಯಲ್ಲಿ ಬಿಷಪ್‌ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಸಂಸ್ಥೆಯ ಖಜಾಂಚಿ ಹಾಗೂ ಕಾನೂನು ಸಲಹೆಗಾರರ ವಿರುದ್ಧ ಲೈಂಗಿಕ, ಮಾನಸಿಕ ಕಿರುಕುಳದ ಆರೋಪ ಮಾಡಿದ್ದು, ಮೈಸೂರಿನ ಒಡನಾಡಿ ಸಂಸ್ಥೆಯ ಸಹಕಾರದಲ್ಲಿ ನಗರದ ಮಹಿಳಾ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಕಳೆದ 10 ವರ್ಷಗಳಿಂದ ಸಂಸ್ಥೆಯಲ್ಲಿ ಖಾಯಂ ಉದ್ಯೋಗಿಯಾಗಿರುವ ತನಗೆ ಕಳೆದ 9 ತಿಂಗಳುಗಳಿಂದ ವೇತನವನ್ನು ತಡೆ ಹಿಡಿಯಲಾಗಿದೆ. ಕರ್ತವ್ಯ ನಿರ್ವಹಿಸುವ ಕೊಠಡಿಗೆ ಬೀಗ ಹಾಕಿ 6 ತಿಂಗಳುಗಳಿಂದ ಉದ್ಯೋಗದಿಂದ ತೆಗೆಯುವ ಹುನ್ನಾರ ನಡೆಸಿದ್ದಾರೆ. ಅಲ್ಲದೆ, ಅಪಪ್ರಚಾರ ಮಾಡಿ ಚಾರಿತ್ರ್ಯವಧೆ ಮಾಡುವ ಪ್ರಯತ್ನ ಮಾಡಲಾಗಿದೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಇದುವರೆಗೆ ಸುಮ್ಮನಿದ್ದಾರೆ. ಈಗ ಒಡನಾಡಿ ಸಂಸ್ಥೆಯವರು ಸ್ಥೈರ್ಯ ತುಂಬಿದ್ದರಿಂದ ಈ ಬಗ್ಗೆ ದೂರು ನೀಡಿರುವುದಾಗಿ ಮಹಿಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಹಿಂದಿನ ಬಿಷಪ್‌ ನಿವೃತ್ತರಾದ ಬಳಿಕ ಸಿಎಸ್‌ಐ ಸಭಾಪ್ರಾಂತದಲ್ಲಿ ಕೆಲವು ಕಾಲ ಬಿಷಪ್‌ ಇರಲಿಲ್ಲ. ಆಗ ಸಂಸ್ಥೆಯ ಖಜಾಂಚಿ ಹಾಗೂ ಕಾನೂನು ಸಲಹೆಗಾರ ವಿವಿಧ ರೀತಿಯಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next