Advertisement

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

07:34 PM Jul 27, 2019 | Team Udayavani |

ಪಡುಬಿದ್ರಿ: ಶಾಲಾ ವಿದ್ಯಾರ್ಥಿನಿಗೆ ವರ್ಷವೊಂದರ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಇನ್ನಾ ಗ್ರಾಮದ ಫೆಲಿಕ್ಸ್‌ ಡಿ’ ಸೋಜಾ(55) ಎಂಬಾತನನ್ನು ಪಡುಬಿದ್ರಿ ಎಸ್‌ಐ ಸುಬ್ಬಣ್ಣ ಅವರು ಜು. 26ರಂದು ಬಂಧಿಸಿದ್ದಾರೆ.

Advertisement

ಬಾಲಕಿಯು ವರ್ಷದ ಹಿಂದೆ ಆರೋಪಿಯ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದಳು. ಈಗ ರಿಕ್ಷಾ ಮೂಲಕ ಶಾಲೆಗೆ ಹೋಗುತ್ತಿದ್ದಾಗಲೂ ಆರೋಪಿಯು ಕೈ ಸನ್ನೆಗಳ ಮೂಲಕ ಬಾಲಕಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದ. ಸಮಾಜ ಕಲ್ಯಾಣ ಇಲಾಖಾಧಿಕಾರಿ ಪ್ರಭಾಕರ ಆಚಾರ್ಯ ಅವರು ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ವರ್ಷದ ಹಿಂದೆಯೂ ಆತ ಕಿರುಕುಳ ನೀಡಿದ್ದ ವಿಷಯ ಬಹಿರಂಗವಾಯಿತು. ಈ ಅಧಿಕಾರಿಯ ಸೂಚನೆಯಂತೆ ಆರೋಪಿಯನ್ನು ಪೋಕೊÕà ಕಾಯಿದೆ ಅಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next