Advertisement

ಬಾಲಕಿಗೆ ಲೈಂಗಿಕ ಕಿರುಕುಳ: ಭಾರತ ಮೂಲದ ವೈದ್ಯ ಸೆರೆ

08:15 AM Aug 07, 2017 | Team Udayavani |

ನ್ಯೂಯಾರ್ಕ್‌: ವಿಮಾನದಲ್ಲಿ ತನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತ ಮೂಲದ ವೈದ್ಯನೊಬ್ಬನನ್ನು ಎಫ್ಬಿಐ ಬಂಧಿಸಿದೆ. ಬಂಧಿತನನ್ನು ವಿಜಯ್‌ಕುಮಾರ್‌ ಕೃಷ್ಣಪ್ಪ (28) ಎಂದು ಗುರುತಿಸಿದ್ದು, ಈತನ ಮೂಲ ಕರ್ನಾಟಕ, ತಮಿಳುನಾಡು ಅಥವಾ ಆಂಧ್ರ ಇರಬಹುದು ಎನ್ನಲಾಗಿದೆ. 

Advertisement

ಜು.23ರಂದು ಸೀಟಲ್‌ನಿಂದ ನ್ಯೂಜೆರ್ಸಿಗೆ ಹೊರಟಿದ್ದ ಯುನೈಟೆಡ್‌ ಏರ್‌ಲೈನ್ಸ್‌ ವಿಮಾನದಲ್ಲಿ ಘಟನೆ ನಡೆದಿದೆ. ವಾಷಿಂಗ್ಟನ್‌ ಮೂಲದ 16 ವರ್ಷದ ಬಾಲಕಿ, ಪ್ರಯಾಣದ ನಡುವೆ ನಿದ್ದೆಗೆ ಜಾರಿದ್ದಳು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿ ಬಾಲಕಿ ತೊಡೆ ಮೇಲೆ ಕೈ ಇರಿಸಿದ್ದಾನೆ. ತಕ್ಷಣ ಬಾಲಕಿಗೆ ಎಚ್ಚರವಾಗಿದ್ದು, ಕೈ ತೆಗೆದುಕೊಂಡಿದ್ದಾನೆ.

ವಿಷಯವನ್ನು ವಿಮಾನ ಸಿಬಂದಿಗೆ ತಿಳಿಸಿದ ಬಾಲಕಿ ಆಸನ ಬದಲಿಸಿಕೊಂಡಿದ್ದಾಳೆ. ನೇವಾಕ್‌ಗೆ ಬಂದಿಳಿಯುತ್ತಿದ್ದಂತೆ ಪೋಷಕರಿಗೆ ಬಾಲಕಿ ವಿಷಯ ತಿಳಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯದೆ ಬಿಟ್ಟ ಯುನೈಟೆಡ್‌ ಏರ್‌ಲೈನ್ಸ್‌ ವಿರುದ್ಧ ಬಾಲಕಿ ಪೋಷಕರು ಎಫ್ಬಿಐಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next