ಬೆಂಗಳೂರು: ಮಹಿಳಾ ಟೆಕ್ಕಿಗಳ ವಿವಿಧ ಭಂಗಿಗಳ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ ಸ್ವಚ್ಚತಾ ಸಿಬ್ಬಂದಿಯೊಬ್ಬನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಧರ್ಮೇಂದ್ರ ಕುಮಾರ್ ಯಾದವ್(24) ಬಂಧಿತ.
ಉತ್ತರ ಪ್ರದೇಶ ಮೂಲದ ಆರೋಪಿ ಇಂದಿರಾನಗರದಲ್ಲಿ ನೆಲೆಸಿದ್ದು, ಸ್ವಚ್ಚತಾ ಕೆಲಸದ ವೇಳೆ ಮಹಿಳೆಯರ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ. ಇದೇ ವೇಳೆ ಆರೋಪಿಯ ಕೃತ್ಯ ಕಂಡು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ. ಬಳಿಕ ಟೆಕ್ಕಿಗಳು ಆರೋಪಿಗೆ ಸಾಮೂಹಿಕವಾಗಿ ಹಲ್ಲೆ ನಡೆಸಿ, ಪೊಲೀಸರಿಗೊಪ್ಪಿಸಿದ್ದಾರೆ.
ಇಂದಿರಾನಗರದ ಸಾಫ್ಟ್ವೇರ್ ಕಂಪೆನಿಯಲ್ಲಿ ಮೂರು ವರ್ಷಗಳಿಂದ ಸ್ವಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಧರ್ಮೇಂದ್ರ, ಕೆಲಸದಲ್ಲಿ ನಿರತರಾಗಿದ್ದ ಮಹಿಳಾ ಟೆಕ್ಕಿಗಳ ವಿವಿಧ ಭಂಗಿಗಳ ಫೋಟೋ ಕ್ಲಿಕ್ಕಿಸುತ್ತಿದ್ದ. ಆಗ ಮತ್ತೂಬ್ಬ ಟೆಕ್ಕಿ ಗಮನಿಸಿ, ಮೊಬೈಲ್ ಕಸಿದು ಪರಿಶೀಲಿಸಿದಾಗ ಎಲ್ಲಾ ಸಿಬ್ಬಂದಿಯ ನಾನಾ ಭಂಗಿಯ ನೂರಾರು ಫೋಟೋಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ.
ತಕ್ಷಣ ಆತನನ್ನು ಹಿಡಿದು ಕಂಪನಿಯ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಬಳಿಕ ಕಂಪೆನಿಯ ಹಿರಿಯ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಧರ್ಮೇಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸ್ವಚ್ಚತಾ ಸಿಬ್ಬಂದಿ ಆಗಿದ್ದರಿಂದ ಮಹಿಳೆಯರ ಶೌಚಾಲಯಕ್ಕೂ ಹೋಗುತ್ತಿದ್ದ.
ಅಲ್ಲಿ ತನ್ನ ಮೊಬೈಲನ್ನು ರಹಸ್ಯವಾಗಿ ಇಟ್ಟು ವಿಡಿಯೋ ಕೂಡ ಮಾಡಿದ್ದಾನೆ. ಹೀಗಾಗಿ ಮೊಬೈಲನ್ನು ವಿಧಿವಿಜ್ಞಾನ ಪರೀûಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಚಿತ್ರೀಕರಿಸಿರುವ ದೃಶ್ಯಗಳನ್ನು ಬೇರೆಡೆ ಹಂಚಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.