Advertisement

ಪ್ರಯಾಣಿಕರಿಗೆ ಚರಂಡಿ ಸ್ಲ್ಯಾಬ್ ಗಳೇ ಆಸರೆ 

02:45 PM Jul 06, 2023 | Team Udayavani |

ದೇವನಹಳ್ಳಿ: ತಾಲೂಕಿನ ನಂದಿಬೆಟ್ಟಕ್ಕೆ ಹೋಗುವ ದಾರಿಯಲ್ಲಿರುವ ಕಾರಹಳ್ಳಿ ಸರ್ಕಲ್‌ ನಲ್ಲಿ ಪ್ರಯಾ ಣಿಕರಿಗೆ ತಂಗುದಾಣದ ವ್ಯವಸ್ಥೆ ಇಲ್ಲದೆ, ರಸ್ತೆ ಪಕ್ಕದಲ್ಲಿ ಹಾಕಿರುವ ಚರಂಡಿ ಸ್ಲ್ಯಾಬ್ ಗಳೇ ಆಸರೆಯಾಗಿವೆ. ನಂದಿಬೆಟ್ಟದ ಕಡೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುವ ಬಸ್‌ಗಳಿಗೆ ಪ್ರಯಾಣಿಕರು ಕಾದು ನಿಂತು ಹೋಗುವ ಪರಿಸ್ಥಿತಿ ವರ್ಷಗಳೇ ಕಳೆಯುತ್ತಿದೆ.

Advertisement

ಸುಮಾರು ವರ್ಷಗಳ ಹಿಂದೆ, ಶಾಸಕರಾಗಿದ್ದ ಎಲ್‌.ಎನ್‌.ನಾರಾಯಣಸ್ವಾಮಿ ಅಧಿಕಾರದ ಅವಧಿ ಯಲ್ಲಿ ಸುಮಾರು 3.5ಕೋಟಿ ರೂ. ವೆಚ್ಚದಲ್ಲಿ ಹೈಟೇಕ್‌ ಬಸ್‌ ನಿಲ್ದಾಣ, ಶೌಚಾಲಯ, ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯಾಗಿದ್ದರೂ ಸಹ ಕಾಮಗಾರಿಗಳು ಮಾತ್ರ ಅಪೂರ್ಣವಾಗಿದ್ದು, ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಅನಾ ನೂಕುಲಗಳ ದರ್ಶನವಾಗುತ್ತಿದೆ.

ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳೀಯವಾಗಿ ನಡೆಯಬೇಕಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಪ್ರಯಾ ಣಿಕ ರಿಗೆ ಉಪಯೋಗ ‌ವಾಗುವಂತೆ ಅನುಕೂಲ  ಮಾ ಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯ ಸಿದ್ದಾರೆ.

ದೇವನಹಳ್ಳಿ ಪಟ್ಟಣಕ್ಕೆ ಹೋಗಬೇಕಾದರೆ, ಕಾರಹಳ್ಳಿ ಕ್ರಾಸ್‌ನಿಂದ ಹೋಗಬೇಕು. ಬಸ್‌ ಬರುವ ತನಕ ಬಿಸಿಲು, ಮಳೆ ಬಂದರೂ ಕಾದು ಕುಳಿತು ಪ್ರಯಾಣಿಸುವ ಪರಿಸ್ಥಿತಿ ಇದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಹೈಟೇಕ್‌ ಬಸ್‌ ನಿಲ್ದಾಣ ಮಾಡುತ್ತೇವೆಂದು ಹೇಳಿದ್ದರು ಆದರೆ ಇಲ್ಲಿಯ ತನಕ ಆಗಿಲ್ಲ. – ಸುಬ್ಬಣ್ಣ , ವಯೋವೃದ್ಧ, ಮೀಸಗಾನಹಳಿ

Advertisement

Udayavani is now on Telegram. Click here to join our channel and stay updated with the latest news.

Next