ಹಳಿಯಾಳ: ಒಂದೂವರೆ ತಿಂಗಳ ಬಳಿಕ ಪೊಲೀಸ್ ರಕ್ಷಣೆಯಲ್ಲಿ ಶನಿವಾರದಿಂದ ದೇಶಪಾಂಡೆ ಆಶ್ರಯ ನಗರದಿಂದಲೇ ಮತ್ತೆ ಒಳಚರಂಡಿ ಕಾಮಗಾರಿ ಆರಂಭಿಸಲಾಗಿದೆ.
ಅಲ್ಲದೇ ಕಾಮಗಾರಿಗೆ ಅಡ್ಡ ಪಡಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ, ಚುನಾಯಿತ ಜನಪ್ರತಿನಿಧಿಗಳ ಆಕ್ಷೇಪಣೆ- ಅಹವಾಲುಗಳನ್ನು ಆಲಿಸಿದ ಹೊರತು 76 ಕೋಟಿ ರೂ. ಬೃಹತ್ ಮೊತ್ತದ ಒಳಚರಂಡಿ ಕಾಮಗಾರಿಮಾಡಬಾರದು ಎಂದು ಬಿಜೆಪಿ ಹಾಗೂ ಸ್ಥಳೀಯರು ಆಕ್ಷೇಪಣೆ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಜ.6 ರಂದು ಪಟ್ಟಣದ ಬಾಬು ಜಗ ಜೀವನರಾಮ್ ಸಭಾ ಭವನದಲ್ಲಿ ಈ ಕುರಿತು ನಡೆದ ಸಭೆಗೆ ಬೆರಳೆಣಿಕೆಯಷ್ಟು ಜನರು ಆಗಮಿಸಿದ್ದರು. ಅಲ್ಲದೇ ಕಾಮಗಾರಿಕುರಿತು ಆಕ್ಷೇಪ ವ್ಯಕ್ತವಾಗಿತ್ತು.ಈ ಸಭೆಯಲ್ಲಿ ಹಳಿಯಾಳದಲ್ಲಿ ಯುಜಿಡಿ ಕಾಮಗಾರಿ ಗುತ್ತಿಗೆ ಪಡೆದವರು ಬೈಲಹೊಂಗಲದಲ್ಲಿ ನಡೆಸುತ್ತಿರುವ ಕಾಮಗಾರಿ ಪರಿಶೀಲಿಸಲು ಹಳಿಯಾಳ ಜನಪ್ರತಿನಿಧಿಗಳು, ಗಣ್ಯರು ಹಾಗೂ ಮಾಧ್ಯಮದವರ ನಿಯೋಗ ಕರೆದುಕೊಂಡು ಹೋಗುವಂತೆ, ಬಡವರ ಮೇಲೆ ಬೀಳುವ ಹೊರೆ ಕಡಿಮೆ ಮಾಡಲು ಪುರಸಭೆ ಸದಸ್ಯರು, ಇನ್ನಿತರ ಜನಪ್ರತಿನಿಧಿಗಳು ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಗಿತ್ತು. ಆದರೆ ಇದ್ಯಾವುದೂ ಆಗದೆ ಶನಿವಾರಒಮ್ಮೆಲೆ ಕಾಮಗಾರಿ ಪ್ರಾರಂಭಿಸಿದ್ದರಿಂದ ಇಲ್ಲಿಯ ಬಡಾವಣೆ ಜನರು ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ವಿಷಯ ತಿಳಿದ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರಿಗೆ ಪ್ರತಿಭಟನೆ ನಡೆಸದಂತೆ ಹಾಗೂ ಕಾಮಗಾರಿಗೆ ಅನುವು ಮಾಡಿಕೊಡುವಂತೆ ವಿನಂತಿಸಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಸ್ಥಳೀಯರು ಕಾಮಗಾರಿಗೆ ಮತ್ತೆಅಡ್ಡಿಪಡಿಸಲು ಮುಂದಾದಾಗ ಬೇಸರಗೊಂಡ ತಹಶೀಲ್ದಾರ್, ಕಾಮಗಾರಿಗೆ ಅಡ್ಡಪಡಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕಾಯ್ದಿರಿಸಿದ ಪೊಲೀಸ್ ತುಕಡಿ ಹಾಗೂ ಹಳಿಯಾಳ ಪೊಲೀಸರು ಸ್ಥಳದಲ್ಲಿ ಬಿಡು ಬಿಟ್ಟಿದ್ದು ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಕ್ಷಣೆ ಕೋರಿದ್ದರಿಂದ ಪೊಲೀಸ್ ಕಾವಲು ಹಾಕಲಾಗಿದೆ ಎಂದು ಪಿಎಸ್‌ಐಮಾಹಿತಿ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರ ಆಕ್ಷೇಪಣೆಗಳಿಗೆ ಮನ್ನಣೆನೀಡದೆ ಯೋಜನೆ ಕುರಿತು ಸ್ಪಷ್ಟನೆ ನೀಡದೆ ದಬ್ಟಾಳಿಕೆ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಹನುಮಂತ ಹರಿಜನ ಆಕ್ರೋಶ ವ್ಯಕ್ತಪಡಿಸಿದರು.