Advertisement

ಹಾಸನ ನಗರಸಭೆ ಚರಂಡಿ ಕಾಮಗಾರಿಗೆ ಆಕ್ಷೇಪ

10:34 AM Jun 14, 2021 | Team Udayavani |

ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಾದು ಹೋಗಿರುವ ರಾಜಕಾಲುವೆಪಕ್ಕದಲ್ಲೇ ಮತ್ತೂಂದು ಚರಂಡಿನಿರ್ಮಾಣಕ್ಕೆ ಮುಂದಾಗಿರುವ ಹಾಸನನಗರಸಭೆ ಧೋರಣೆಗೆ ನಾಗರೀಕರುಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಮುಚ್ಚಿ ಹೋಗಿರುವ ರಾಜಕಾಲುವೆ:ನಗರದ ಮಹಾರಾಜಪಾರ್ಕ್‌ನಿಂದಹಳೆ ಬಸ್‌ನಿಲ್ದಾಣದ ನಡುವೆ ಕಟ್ಟಿನಕೆರೆ ಮಾರು ಕಟ್ಟೆಮೂಲಕ ರಾಜಕಾಲುವೆ ಹಾದುಹೋಗಿತ್ತು. ಬಸ್‌ ನಿಲ್ದಾಣದಲ್ಲಿಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿದ್ದರಿಂದ ಬಸ್‌ ನಿಲ್ದಾಣದ ಮುಂಭಾಗಹೊಸದಾಗಿ ಚರಂಡಿ ನಿರ್ಮಿಸಿ ಎನ್‌.ಆರ್‌.ವೃತ್ತದ ಮೂಲಕ ಚನ್ನಪಟ್ಟಣಕೆರೆಗೆಚರಂಡಿ ಸಂಪರ್ಕ ಕಲ್ಪಿಸಲಾಗಿತ್ತು.

ಹಳೆಬಸ್‌ ನಿಲ್ದಾಣವನ್ನು ನೆಲಸಮಗೊಳಿಸಿಹೊಸದಾಗಿ ನಗರ ಬಸ್‌ ನಿಲ್ದಾಣ ನಿರ್ಮಿಸಿದನಂತರ ಕಟ್ಟಿನಕೆರೆ ಮಾರುಕಟ್ಟೆ ಒಳಗೆ ರಾಜಕಾಲುವೆ ಮುಚ್ಚಿ ಹೋಗಿತ್ತು. ರಾಜಕಾಲುವೆಒತ್ತುವರಿ ಮಾಡಿ ಕೆಲ ಅಂಗಡಿ ಮಾಲೀಕರುಮೆಟ್ಟಿಲು ಮಾಡಿಕೊಂಡಿದ್ದಾರೆ.

ಅಂಗಡಿ ಒತ್ತುವರಿ ತೆರವು:ರಾಜಕಾಲುವೆಇರುವುದನ್ನು ಖಾತರಿ ಪಡಿಸಿ ಕೊಂಡು,ಕಾಲುವೆಗೆ ತುಂಬಿ ಕೊಂಡಿರುವ ಮಣ್ಣುತೆಗೆದು ಸ್ವತ್ಛಗೊಳಿಸದೆ ಹೊರ ಚರಂಡಿನಿರ್ಮಾಣದ ಕಾಮ ಗಾರಿ ಯನ್ನು ಹಾಸನನಗರಸಭೆ ಆರಂಭಿಸಿತು. ಶನಿವಾರಕಾಮಗಾರಿ ನಡೆಯುತ್ತಿದ್ದಾಗ ಕೆಲವುವ್ಯಾಪಾರಿಗಳು, ನಾಗರೀಕರರು ಆಕ್ಷೇಪವ್ಯಕ್ತಪಡಿಸಿ ಕಾಮಗಾರಿಗೆ ತಡೆ ಒಡ್ಡಿದಾಗ ನಗರಸಭೆ ಅಧ್ಯಕ್ಷ ಮೋಹನ್‌ ಮತ್ತುಎಂಜಿನಿಯರ್‌ ಸ್ಥಳಕ್ಕಾಗಮಿಸಿದರು.ಪರಿಶೀಲನೆ ನಡೆಸಿದ ಅಧ್ಯಕ್ಷ ಮೋಹನ್‌ರಾಜಕಾಲುವೆ ಇರುವುದನ್ನು ಖಾತರಿಪಡಿಸಿಕೊಂಡರು. ಈ ಬಗ್ಗೆ ಪರಿಶೀಲಿಸಿರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next