Advertisement

ರಸ್ತೆ ಮೇಲೆ ಚರಂಡಿ ನೀರು: ಸ್ವಚ್ಛತೆ ಮರೆತ ಗ್ರಾಪಂ

11:30 AM Apr 28, 2022 | Team Udayavani |

ಮಾದನಹಿಪ್ಪರಗಿ: ಮಾದಾರ ಚೆನ್ನಯ್ಯ, ಶಿವಲಿಂಗೇಶ್ವರ ವಿರಕ್ತ ಮಠಗಳಿಗೆ ಹೋಗುವ ಮುಖ್ಯಬೀದಿಯಲ್ಲಿ ಚರಂಡಿ ನೀರು ನಿಂತು ಗಬ್ಬೆದ್ದು ನಾರುತ್ತಿದ್ದರೂ ಗ್ರಾಮ ಪಂಚಾಯಿತಿ ಗಮನ ಹರಿಸುತ್ತಿಲ್ಲವೆಂದು ಶ್ರೀ ಮಠಗಳ ಭಕ್ತರು ಆರೋಪಿಸಿದ್ದಾರೆ.

Advertisement

ಅನುದಾನದ ನೆಪ ಹೇಳಿಕೊಂಡು ಅಭಿವೃದ್ಧಿಯತ್ತ ಗಮನ ನೀಡದ ಗ್ರಾಮ ಪಂಚಾಯಿತಿ ಸದಸ್ಯರು ಇಚ್ಛಾಶಕ್ತಿ ಕೊರತೆ ತೋರುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಿತ್ಯ ನಸುಕಿನಲ್ಲಿಯೇ ಬರಿಗಾಲಲ್ಲಿ ಶ್ರೀಗಳ ಮಠದ ದರ್ಶನಕ್ಕೆ ಬರುವವರಿಗೆ ಬಹಳ ಕಿರಿಕಿರಿಯಾಗಿದೆ. ಸುತ್ತಮುತ್ತಲಿನ ಮನೆಗಳಲ್ಲಿನ ನಿವಾಸಿಗಳು ನಿಂತ ನೀರಿನ ವಾಸನೆಯಿಂದ ಬೆಸತ್ತು ಹೋಗಿದ್ದಾರೆ. ವಿದ್ಯಾರ್ಥಿಗಳು ಸೈಕಲ್‌ ಮೇಲೆ ಹೋಗುವಾಗ ಈ ಕೊಚ್ಚೆ ನೀರಿನಲ್ಲಿ ಬಿದ್ದ ಉದಾಹರಣೆಗಳು ಅನೇಕ. ಸಣ್ಣಮಕ್ಕಳು, ವೃದ್ಧರು ಈ ಹಾದಿಯಲ್ಲಿ ಬರಬೇಕಾದರೆ ಇದೇ ನೀರಿನಲ್ಲಿ ನಡೆದು ಬರಬೇಕಾಗಿದೆ.

ಚರಂಡಿ ನೀರು ತಗ್ಗು ಪ್ರದೇಶದಲ್ಲಿ ನಿಲ್ಲುತ್ತಿದೆ. ಈ ನೀರನ್ನು ಬೇರೆಡೆ ಸಾಗಿಸಲು ಮುಂದಾದಾಗ ಅಲ್ಲಿನ ಜಾಗದ ಮಾಲೀಕರು ಅಡ್ಡಿಪಡಿಸಿದ್ದಾರೆ. ಮಠದ ಜಾತ್ರೆ ಸಮೀಪ ಬಂದಿರುವುದರಿಂದ ಪರ್ಯಾಯವಾಗಿ ಮುರುಮ್‌ ಹಾಕಿ ಎತ್ತರ ಮಾಡಿ ನೀರು ಸಾಗಿಸಲು ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. -ಗೀತಾ ಶರಣಬಸಪ್ಪ ಜಿಡ್ಡಿಮನಿ, ಸದಸ್ಯೆ, ವಾರ್ಡ್‌ ನಂ.6

Advertisement

Udayavani is now on Telegram. Click here to join our channel and stay updated with the latest news.

Next