Advertisement

ರಾಜಭವನ ರಸ್ತೆಯಲ್ಲಿ ಕೊಳಚೆ ನೀರು: ವಾಹನ ಸವಾರರಿಗೆ ಕಿರಿಕಿರಿ

12:19 PM Jun 06, 2018 | Team Udayavani |

ಬೆಂಗಳೂರು: ನಗರದ ರಾಜಭವನ ಮುಖ್ಯ ರಸ್ತೆಯ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಕಳಪೆ ಕಾಮಗಾರಿಯಿಂದಾಗಿ ಒಳಚರಂಡಿ ಕೊಳವೆಯೊಂದು (ಮ್ಯಾನ್‌ಹೋಲ್‌) ಬಾಯ್ಬಿಟ್ಟಿದ್ದು, ಕೊಳಚೆ ನೀರು ರಸ್ತೆ ತುಂಬೆಲ್ಲ ಹರಿದು ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿದೆ.

Advertisement

ವಿಧಾನಸೌಧ, ರಾಜಭವನ, ಹೈಕೋರ್ಟ್‌ ಎಚ್‌.ಎ.ಎಲ್‌ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಈ ರಸ್ತೆಯು ಸಂಪರ್ಕ ಕಲ್ಪಿಸುವುದರಿಂದ ಈ ಜಾಗದಲ್ಲಿ ಸಾಕಷ್ಟು ವಾಹನ ದಟ್ಟಣೆ ಇದ್ದು, ಅಧಿಕಾರಿ -ಸಿಬ್ಬಂದಿ ದುರ್ವಾಸನೆಯಿಂದ ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊಳಚೆ ನೀರು ಕೊಳವೆಯಿಂದ ಹೊರಬಂದು ರಸ್ತೆ ತುಂಬೆಲ್ಲಾ ನಿಲ್ಲುವುದರಿಂದ ಸಾಕಷ್ಟು ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಇನ್ನು ವಾಹನಗಳ ಸಂಚರಿಸುವ ವೇಳೆ ಅಕ್ಕಪಕ್ಕದ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಈ ಕೊಳಚೆ ನೀರು ಸಿಡಿಯುತ್ತಿದೆ.

ಕಳೆದ ಒಂದು ತಿಂಗಳಿಂದ ಈ ಸಮಸ್ಯೆ ಇದ್ದು, ಪ್ರತಿನಿತ್ಯ ಆಫೀಸಿಗೆ ತಡವಾಗಿ ಹೋಗುತ್ತಿದ್ದೇವೆ. ಸುತ್ತಮುತ್ತಲ ಕಚೇರಿಗಳು ದುರ್ವಾಸನೆಯಿಂದ ಕೂಡಿವೆ. ಇಷ್ಟೇಲ್ಲಾ ಸಮಸ್ಯೆ ಇದ್ದರೂ ಜಲಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಂದು ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರು ಹೇಳುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next