ರಬಕವಿ-ಬನಹಟ್ಟಿ: ಕೈಮಗ್ಗ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಕೂಡಾ ಇದಕ್ಕೆ ಸ್ಪಂದಿಸಿದ್ದಾರೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.
ಅವರು ರಬಕವಿ-ಬನಹಟ್ಟಿ ನಗರಗಳಲ್ಲಿ ಕೆಎಚ್‌ಡಿಸಿ ನೇಕಾರಿಗೆ, ಕೂಲಿ ಕಾರ್ಮಿಕರಿಗೆ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಿಂದ ಕೊಡಮಾಡುವ ಕಿಟ್ ವಿತರಿಸಿ ಮಾತನಾಡಿದರು. ಆರ್ಥಿಕವಾಗಿ ಹಿಂದೂಳಿದ ಬಡವರಿಗೆ ಅನುಕೂಲವಾಗಿಲಿ ಎಂದು ಕರ್ನಾಟಕ ಸರಕಾರದ ಕಿಟ್‌ಗಳನ್ನು ಕಡು ಬಡವರಿಗೆ ನೀಡಲಾಗುತ್ತಿದೆ ಎಂದರು.
ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೆಎಚ್‌ಡಿಸಿ ಅಭಿವದ್ಧಿಗೆ ಏನು ಮಾಡಬೇಕು ಎಂದು 6-7 ನೂತನ ಯೋಜನೆಗಳನ್ನು ಕೈಗೊಂಡಿದ್ದೇವೆ. ಕೆಚ್‌ಡಿಸಿಯ 110 ಕೋಟಿ ಸಾಲವಿದ್ದು, ಇಲ್ಲಿಯವರೆಗೆ ನಮ್ಮದು 100 ಕೋಟಿ ಎಫ್‌ಡಿ ಇದ್ದು, ಅದನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಲು ತಿಳಿಸಿದ್ದು ಇದರಿಂದ ಬಡ್ಡಿ ಹಣದ ಉಳಿತಾಯವಾಗುತ್ತದೆ. ನೇಕಾರರ ಪಗಾರನ್ನು ಸರಕಾರವೇ ಭರಿಸಲು ಹೇಳಿದ್ದು, ಅದಕ್ಕೂ ಒಪ್ಪಿಕೊಂಡಿದ್ದಾರೆ. 40 ಕೋಟಿ ಹಾಘೂ 23 ಕೋಟಿಯ ಸಾಲವಿತ್ತು ಅದನ್ನು ಶೇರಾಗಿ ಪರಿವರ್ತಿಸಲು ಹೇಳಿದ್ದೇವೆ. ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಶೀಘ್ರದಲ್ಲೇ ಜಿಓ ಆಗಲಿದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.
ಕೆಎಚ್‌ಡಿಸಿ ನೇಕಾರರ 15% ಪಗಾರನ್ನು ಹೆಚ್ಚು ಮಾಡಿದ್ದು, ನಿರಂತರ ಉದ್ಯೋಗ ನೀಡುವತ್ತ ಕ್ರಮ ತೆಗೆದುಕೊಳ್ಳಲಾಗಿದೆ. ನಿರಂತರವಾಗಿ ಕಚ್ಚಾ ಮಾಲು ಪೂರೈಕೆಯಾಗುತ್ತಿದ್ದು ಬರುವಂತಹ ದಿನಗಳಲ್ಲಿ ಇನ್ನೂ 20% ಇಂದ 25% ರಷ್ಟು ವೇತನವನ್ನು ಜಿಓ ಆದ ನಂತರ ಹೆಚ್ಚಳ ಮಾಡಲಾಗುವುದು. ವಿದ್ಯಾವಿಕಾಸ ಬಟ್ಟೆ ವಿತರಣೆಯಿಂದ ಆಗಿರುವ ಸುಮಾರು 10 ಕೋಟಿ ರೂಪಾಯಿಗಳಲ್ಲಿ 5 ಕೋಟಿಗಳನ್ನು ಸರಿದೂಗಿಸಲು ಹಾಗೂ 6.5 ಕೋಟಿ ದಂಡ ಮರಳಿಸಲು ಸರಕಾರ ಒಪ್ಪಿಗೆ ನೀಡಿದೆ.
ಈಗಾಗಲೇ ಹಲವಾರು ನಿಗಮಗಳು ಪೆಟ್ರೋಲ ಬಂಕ್ ಸ್ಥಾಪಿಸಿ ಉತ್ತಮ ಆದಾಯ ಗಳಿಸುತ್ತಿದ್ದು ಅದೇ ರೀತಿ ನಮ್ಮ ನಿಗಮದಿಂದ ಸುಮಾರು 10ಕಡೆ ಪೆಟ್ರೋಲ್ ಬಂಕ್‌ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು ಈಗಾಗಲೇ ಹುಬ್ಬಳಿಯಲ್ಲಿ ಒಂದು ಸ್ಥಾಪನೆ ಮಾಡುತ್ತಿದ್ದು, ಏಕಕಾಲಕ್ಕೆ 10 ಬಂಕ್‌ಗಳ ಬೇಡಿಕೆ ಇದ್ದು ಪರಿಶೀಲನೆ ಹಂತದಲ್ಲಿದ್ದು, 5-6 ತಿಂಗಳಲ್ಲಿ ಪ್ರಾರಂಭವಾಗುತ್ತವೆ ಎಂದರು.
ಜಿಎಸ್‌ಟಿ 5% ಸ್ವಾಗತ : ಜವಳಿ ಉದ್ದಿಮೆಗೆ ಮೊದಲಿನಂತೆ ಶೇ. 5 ರಷ್ಟು ತೆರಿಗೆಯನ್ನು ಸರಕಾರ ಮುಂದುವರೆಸಲು ತೀಮಾರ್ನಿಸಿದ್ದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳನ್ನು ಸರಕಾವನ್ನು ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ತೆಗ್ಗಿ, ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಮಹಾದೇವ ಆಲಕನೂರ ಸೇರಿದಂತೆ ಅನೇಕರು ಇದ್ದರು.