Advertisement

ಏಳನೇ ಆರ್ಥಿಕ ಗಣತಿಗೆ ಚಾಲನೆ ಕೊಟ್ಟ ಸಿ.ಎಂ. ಬಿಎಸ್ ಯಡಿಯೂರಪ್ಪ

12:51 PM Nov 06, 2019 | Suhan S |

ಬೆಂಗಳೂರು : ಏಳನೇ ಆರ್ಥಿಕ ಗಣತಿ – 2019ಕ್ಕೆ ವಿಧಾನಸೌಧದಲ್ಲಿ ಬುಧವಾರ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

Advertisement

ನವೆಂಬರ್ 15 ರಿಂದ ಮಾರ್ಚ್ 2020 ರ ವರೆಗೆ ರಾಜ್ಯದಲ್ಲಿ ಗಣತಿ ಕಾರ್ಯ ನಡೆಯಲಿದೆ. ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಗಣತಿ ಕಾರ್ಯ ನಡೆಯಲಿದೆ. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಿಂದ ನಡೆಯುತ್ತಿರುವ ಗಣತಿ ಕಾರ್ಯ ಇದಾಗಿದೆ.

ಮೊದಲನೆಯದಾಗಿಯೇ ಬಿಎಸ್ ವೈ ರಿಂದ ಮಾಹಿತಿ ಪಡೆದ ಗಣತಿದಾರರು ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಾ….? ನೀವು ಉದ್ಯೋಗ ಏನು  ಮಾಡ್ತೀರಾ..? ನಿಮಗೆ ಆದಾಯ ಎಷ್ಟು ಬರುತ್ತೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ರಾಜ್ಯದ ಮುಖ್ಯಮಂತ್ರಿಗಳಿಂದಲೇ ಗಣತಿ ಕಾರ್ಯ ಆರಂಭವಾಗಿದೆ.ಈ ವೇಳೆ ಗಣತಿದಾರರಿಗೆ ಸಿಎಂ ಯಡಿಯೂರಪ್ಪ ಆರ್ಥಿಕ ಗಣತಿಗೆ ಹೋದಾಗ ನಿಖಿರ‌ ಮಾಹಿತಿ ಪಡೆಯಬೇಕು. ಜನರಿಂದ ಆರ್ಥಿಕತೆ ಬಗ್ಗೆ ನಿಖರ ಮಾಹಿತಿ ಪಡೆಯಬೇಕು ನಿಖಿರ ಮಾಹಿತಿ ಪಡೆದ್ರೆ ದೇಶದಲ್ಲಿ ಯೋಜನೆಗಳನ್ನು ರೂಪಿಸಲು ಸಾಧ್ಯ ಗಣತಿ ಮಾಡಲು ಹೋದಾಗ ಕೆಲ ಜನರು ಮುಜಗರ ಪಡಬಹುದು ಯಾಕೆ ನಾವು ಮಾಹಿತಿ ಕೊಡಬೇಕು ಅಂತಾ ಹಿಂದೆ ಮುಂದೆ ನೋಡಬಹುದು ಹೀಗಾಗಿ ಅವರಿಂದ ಇದನ್ನು ಹೋಗಲಾಡಿಸಬೇಕು ಅವರಿಂದ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಸಲಹೆ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next