Advertisement
ಜ್ವರ ರೀತಿಯ ಲಕ್ಷಣಗಳು (ತಾಪಮಾನ ಏರಿಕೆ, ಆಯಾಸ, ಕೆಮ್ಮು, ತಲೆ ಸುತ್ತುವಿಕೆ), ಸಾಮಾನ್ಯ ಶೀತದಂಥ ಲಕ್ಷಣಗಳು (ಮೂಗು ಸೋರುವುದು,ಸೀನುವಿಕೆ, ಒಣ ಗಂಟಲು), ಕೀಲು ಮತ್ತು ಸ್ನಾಯು ನೋವು, ಕಣ್ಣು ಮತ್ತು ಮೂಗಿನ ಉರಿಯೂತ, ಶ್ವಾಸಕೋಶ ತೊಂದರೆಗಳು (ನ್ಯೂಮೋನಿಯಾ ಮತ್ತು ಉಸಿರಾಟದ ಸಮಸ್ಯೆ), ಜಠರದ ಸಮಸ್ಯೆಗಳು (ಅತಿಸಾರ, ವಾಕರಿ ಕೆ), ವಾಸನೆ ಮತ್ತು ರುಚಿ ನಷ್ಟ. ಸೌಮ್ಯ ಪ್ರಮಾಣದಲ್ಲಿ ಸೋಂಕು ಇರುವವರಲ್ಲೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಹಾಗೂ ರೋಗ ವಾಸಿಯಾದ 10 ವಾರದ ನಂತರದವರೆಗೂ ಈ ಸಮಸ್ಯೆಗಳು ಕಾಡಬಹುದು ಎನ್ನುತ್ತದೆ ಈ ಸಂಶೋಧನೆ.
ಅ.3ರಿಂದ ನ.3ರ ಅವಧಿಯಲ್ಲಿ ಕೇರಳ, ದೆಹಲಿ, ಪ.ಬಂಗಾಳ ಮತ್ತು ಮಣಿಪುರದಲ್ಲಿ ಕೊರೊನಾ ಸಕ್ರಿಯ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಈ ಸಂಖ್ಯೆ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಕಳೆದ 7 ವಾರಗಳಲ್ಲಿ ದೇಶಾದ್ಯಂತದ ಸೋಂಕಿತರ ಸಂಖ್ಯೆ ಇಳಿಮುಖವಾದ ಕಾರಣ, ಆಸ್ಪತ್ರೆಗಳ ಮೇಲಿನ ಹೊರೆ ಸ್ವಲ್ಪಮಟ್ಟಿಗೆ ತಗ್ಗಿದೆ ಎಂದೂ ಹೇಳಿದೆ. ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳಲ್ಲಿ 38,310 ಪ್ರಕರಣ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.