Advertisement

ನಕ್ಸಲರಿಂದ ಏಳು ಪೊಲೀಸರ ಹತ್ಯೆ

09:57 AM May 21, 2018 | Team Udayavani |

ರಾಯು³ರ: ದೇಶದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ನಕ್ಸಲರನ್ನು ಹತ್ತಿಕ್ಕಿದ್ದರೂ, ಛತ್ತೀಸ್‌ಗಢದಲ್ಲಿ ಭಾನುವಾರ ಏಳು ಪೊಲೀಸರನ್ನು ನಕ್ಸಲರು ಹತ್ಯೆಗೈದಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಛತ್ತೀಸ್‌ಗಢಕ್ಕೆ ಆಗಮಿಸುವ ದಿನದಂದೇ ಈ ಘಟನೆ ನಡೆದಿದೆ. ದಂತೇವಾಡದ  ಕಿರಾಂದುಲ್‌, ಪಾಲಾ°ರ್‌ ಹಳ್ಳಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಈ ಟ್ರಕ್‌ಗಳಿಗೆ ಭದ್ರತೆ ಒದಗಿಸಲು ಛತ್ತೀಸ್‌ಗಢ ಸಶಸ್ತ್ರ ದಳ (ಸಿಎಎಫ್) ಮತ್ತು ಜಿಲ್ಲಾ ಪೊಲೀಸ್‌ ಪಡೆ (ಡಿಎಫ್) ಜಂಟಿಯಾಗಿ ಕಾವಲು ಕಾಯುತ್ತಿತ್ತು.

Advertisement

ಮಧ್ಯಾಹ್ನ ಹನ್ನೆರಡು ಗಂಟೆಯ ಸುಮಾರಿಗೆ ಪೊಲೀಸರಿದ್ದ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ. ಎರಡು ಪೊಲೀಸ್‌ ವಾಹನಗಳು ಢಿಕ್ಕಿ ಹೊಡೆಯುವಷ್ಟು ಈ ಸ್ಫೋಟದ ತೀವ್ರತೆ ಇತ್ತು ಎಂದು ಹೇಳಲಾಗಿದೆ. ಸ್ಥಳದಲ್ಲೇ ಐವರು ಪೊಲೀಸರು ಸಾವನ್ನಪ್ಪಿದ್ದಾರೆ. ಇನ್ನು ಇಬ್ಬರನ್ನು ಕಿರಾಂದುಲ್‌ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವ ವೇಳೆ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರನ್ನು ರಾಯು³ರ ಆಸ್ಪತ್ರೆಗೆ ವಿಮಾನದಲ್ಲಿ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next