Advertisement

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

09:08 PM May 29, 2022 | Team Udayavani |

ಬೀದರ್: ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ನೌನಿಹಾ ಮಂಡಿ‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ನ ಏಳು ಜನ ಮೃತಪಟ್ಟು, ಎಂಟಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿರುವ ಘಟನೆ‌ ರವಿವಾರ ನಡೆದಿದೆ.

Advertisement

ಆಯೋಧ್ಯ ಸೇರಿದಂತೆ ತೀರ್ಥ ಯಾತ್ರೆಗೆ ಟ್ರಾವೆಲರ್ ನಲ್ಲಿ ತೆರಳಿದ್ದರು‌. ಮೃತಪಟ್ಟವರೆಲ್ಲರೂ ಬೀದರ ನಗರದ ಗುಂಪಾ ಪ್ರದೇಶದವರು ಆಗಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ

ಉತ್ತರ ಪ್ರದೇಶದ ತೀರ್ಥ ಕ್ಷೇತ್ರಗಳಿಗೆ ಇಲ್ಲಿನ ಗುಂಪಾದ ಎರಡು ಕುಟುಂಬಗಳು ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಹರಾಯಿಚ್ ಕಡೆಯಿಂದ ಬರುತ್ತಿದ್ದ ಟ್ರಾವೆಲರ್ ಮತ್ತು ಲಖಿಮಪೂರ ಖಾರಿ ಕಡೆಯಿಂದ ಬರುತಿದ್ದ ಟ್ರಕ್ ನಡುವೆ‌ ಮುಖಾಮುಖಿ‌ ಡಿಕ್ಕಿ ಸಂಭವಿಸಿದೆ.

Advertisement

ಮೃತಪಟ್ಟವರನ್ನು ಶಿವಕುಮಾರ ಪೂಜಾರ (28), ಜಗದೇವಿ (52), ಮನ್ಮಥ (36), ಅನೀಲ‌ ವಿಜಯಕುಮಾರ (30), ಸಂತೋಷ ಕಾಶಿನಾಥ (30), ಶಶಿಕಲಾ ರಾಜಕುಮಾರ (38) ಮತ್ತು ಸರಸ್ವತಿ ಜಗನ್ನಾಥ (47) ಎಂದು ಗುರುತಿಸಲಾಗಿದೆ

ಅಪಘಾತ: ಯೋಗಿ ಆದಿತ್ಯನಾಥ್‌ ಜತೆ ಮಾತನಾಡಿದ ಸಿಎಂ
ಬೆಂಗಳೂರು: ಅಯೋಧ್ಯೆ ಯಾತ್ರೆಗೆ ತೆರಳುತ್ತಿದ್ದ ಬೀದರ್‌ ಜಿಲ್ಲೆಯ ಪ್ರವಾಸಿಗರ ತಂಡದ ಮಿನಿ ಬಸ್‌ (ಟಿಟಿ) ಉತ್ತರ ಪ್ರದೇಶದ ಲಖೀಂಪುರ್‌ ಖೇರಿ ಬಳಿ ಅಪಘಾತ ಸಂಭವಿಸಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟು 9 ಮಂದಿ ಗಾಯಗೊಂಡಿರುವ ಘಟನೆ ಅತ್ಯಂತ ದುರದೃಷ್ಟಕರ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ಸಂತಾಪ ತಿಳಿಸಿರುವ ಮುಖ್ಯಮಂತ್ರಿಗಳು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಜಿಲ್ಲಾಡಳಿತ ಭರದಿಂದ ರಕ್ಷಣ ಕಾರ್ಯಾಚರಣೆ ನಡೆಸುತ್ತಿದೆ. ರಾಜ್ಯದ ಪ್ರವಾಸಿಗರ ಸುರಕ್ಷತೆ, ಅವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next