Advertisement

ವಿಜಯಪುರ: ಒಂದೇ ದಿನ 7 ಜನರಿಗೆ ಕೋವಿಡ್ ಸೋಂಕು, ಬಾಧಿತರ ಸಂಖ್ಯೆ 68ಕ್ಕೇರಿಕೆ

06:13 PM May 22, 2020 | keerthan |

ವಿಜಯಪುರ: ಶುಕ್ರವಾರ ಒಂದೇ ದಿನ ವಿಜಯಪುರ ಜಿಲ್ಲೆಯಲ್ಲಿ 7 ಜನರಿಗೆ ಕೋವಿಡ್-19  ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.

Advertisement

ಶುಕ್ರವಾರ ಬಿಡುಗಡೆಯಾದ ಹೆಲ್ತ್ ಬುಲಿಟಿನ್ ನಲ್ಲಿ ಜಿಲ್ಲೆಯ ಮತ್ತೆ 7 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಲ್ಲಿ ಮೂರು ಹೆಣ್ಣು ಹಾಗೂ ನಾಲ್ಕು ಪುರುಷರು ಸೇರದ್ದಾರೆ. ಹೊಸ ಸೋಂಕಿತರಲ್ಲಿ ಇಬ್ಬರು ನಗರದ ಕಂಟೈನ್ಮೆಂಟ್ ಝೋನ್ ವಲಯದ ಸಂಪರ್ಕ ಇದ್ದರೆ, ಇತರೆ ಐವರು ಮಹಾರಾಷ್ಟ್ರ ರಾಜ್ಯದಿಂದ ಮರಳಿ, ಸಾಂಸ್ಥಿಕ ಕ್ವಾರಂಟೈನ್ ನಿಗಾದಲ್ಲಿ ಇದ್ದವರಾಗಿದ್ದಾರೆ.

ಹೊಸ ಸೋಂಕಿತರನ್ನು ಕಂಟೋನ್ಮೆಂಟ್ ಪ್ರದೇಶದ ಸಂಪರ್ಕ ಹೊಂದಿದ್ದ 34 ವರ್ಷದ ಯುವಕ ಪಿ1660, 33 ವರ್ಷದ ಯುವಕ ಪಿ1661, ಮಹಾರಾಷ್ಟ್ರ ರಾಜ್ಯದಿಂದ ಮರಳಿರುವ 30 ವರ್ಷದ ಯುವ ಪಿ1725, 15 ವರ್ಷದ ಬಾಲಕಿ ಪಿ1726, 36 ವರ್ಷದ ಮಹಿಳೆ ಪಿ1727, 29 ವರ್ಷದ ಮಹಿಳೆ ಪಿ1728, 20 ವರ್ಷದ ಯುವಕ ಪಿ1729 ಎಂದು ಗುರುತಿಸಲಾಗಿದೆ.

ಹೊಸದಾಗಿ ದೃಢಪಟ್ಟ 7 ಸೋಂಕಿತರು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68 ಕ್ಕೆ ಏರಿದೆ. ಕೋವಿಡ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಫಲವಾಗಿ ಈ ವರಗೆ 41 ಜನರು ಸೋಂಕುಮುಕ್ತರಾಗಿ ಮನೆಗೆ ಮರಳಿದ್ದು, 23 ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 4 ಸೋಂಕಿತರು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next