Advertisement

ಮಾವಿನ ಲಾರಿ ಪಲ್ಟಿಯಾಗಿ 7 ಮಂದಿ ಕೂಲಿ ಕಾರ್ಮಿಕರು ದಾರುಣ ಸಾವು 

09:41 AM Jun 17, 2018 | Team Udayavani |

ಚಿತ್ತೂರು: ಆಂಧ್ರದ ಕುಪ್ಪಂನಲ್ಲಿ  ಮಾವಿನ ಕಾಯಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ತಮಿಳುನಾಡು ಮೂಲದ 7 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಶನಿವಾರ ರಾತ್ರಿ ಸಂಭವಿಸಿದೆ. 

Advertisement

ಅವಘಡದಲ್ಲಿ ಲಾರಿಯಲ್ಲಿದ್ದ 15 ಕ್ಕೂ ಹೆಚ್ಚು  ಕಾರ್ಮಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. 

ಘಾಟ್‌ ರಸ್ತೆಯಲ್ಲಿ ಚಾಲಕನಿಗೆ ನಿಯಂತ್ರಣ ತಪ್ಪಿ  ಲಾರಿ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತರ ಪೈಕಿ ಮೂವರು ಮಹಿಳೆಯರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕೃಷ್ಣಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next