ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ರೈತ ಕುಟುಂಬದ ಗೀತಾ ಮತ್ತು ಎಚ್.ಸಿ.ರಮೇಶ್ ದಂಪತಿಗಳ ಪುತ್ರಿ ಎಚ್.ಆರ್.ಅಪೂರ್ವ ಕಳೆದ ವಾರ ನಡೆದ ವಿಟಿಯು ಘಟಿಕೋತ್ಸವದ ವೇಳೆ 7 ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಅನಕ್ಷರಸ್ಥ ತಾಯಿ, ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡಿರುವ ತಂದೆ, ಪಿಯುಸಿ ಕಲಿಯುತ್ತಿರುವ ತಮ್ಮ ಒಂದೂವರೆ ಎಕರೆ ಜಮೀನಿನ ಕೃಷಿ ಅವಲಂಬನೆ ನಡುವೆ ಸಾಮಾನ್ಯ ರೈತಕುಟುಂಬದ ವಿದ್ಯಾರ್ಥಿನಿ 7 ಚಿನ್ನದ ಪದಕ ಪಡೆಯುವ ಜತೆಗೆಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪರೀಕ್ಷೆಯಲ್ಲಿಮೊದಲ ರ್‍ಯಾಂಕ್ ಗಳಿಸುವ ಮೂಲಕ ತಂದೆ, ತಾಯಿ, ಶಿಕ್ಷಣ ಸಂಸ್ಥೆಗೆ ಹಿರಿಮೆ ತಂದಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸ್ವಗ್ರಾಮ ಮದ್ದೂರುತಾಲೂಕಿನ ಕೆ.ಹೊನ್ನಲಗೆರೆ ಆರ್‌ಕೆ ಪ್ರೌಢ ಶಾಲೆಯಲ್ಲಿ ಪೂರೈಸಿಎಸ್ ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.96 ಅಂಕ ಗಳಿಕೆಯೊಡನೆಅಂದೇ ತನ್ನ ಶಾಲೆಯ ಶಿಕ್ಷಕರ ಮೆಚ್ಚುಗೆಗೆ ಪಾತ್ರಳಾದ ಎಚ್.ಆರ್.ಅಪೂರ್ವ ಮುಂದಿನ ಸಾಧನೆಯಲ್ಲೂ ಎತ್ತಿದ ಕೈ.ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್: ಆರ್.ಕೆ.ವಿದ್ಯಾಸಂಸ್ಥೆಯವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಅಪೂರ್ವ ಶೇ.93 ಅಂಕಗಳೊಡನೆ ತೇರ್ಗಡೆಯಾಗಿ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಲಹೆ ಮೇರೆಗೆ ಎಂಜಿನಿಯರಿಂಗ್ ಆಯ್ಕೆ ಮಾಡುವ ಮೂಲಕ ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ಸ್ ಮತ್ತುಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಸೇರ್ಪಡೆಗೊಂಡು ಅತ್ಯುನ್ನತ ಸಾಧನೆಗೈದಿದ್ದಾರೆ.
ಸ್ವತಃ ಕೃಷಿಕರಾದ ತಂದೆ, ತಾಯಿಯ ಪರಿಸ್ಥಿತಿ ಮತ್ತು ಮುಂದೆ ಸಾಧಿಸಬೇಕೆಂಬ ಛಲದೊಡನೆ ನಿರಂತರ ಕಲಿಕೆಗೆ ಒತ್ತು ನೀಡುವಜತೆಗೆ ಪದಕ, ಪ್ರಶಸ್ತಿ, ನಿರೀಕ್ಷಿಸದೆ ಓದಿಗಷ್ಟೆ ಒತ್ತು ನೀಡಿದಅಪೂರ್ವ ಸ್ಥಳೀಯರ ಹಾಗೂ ತಾನು ಕಲಿತ ಶಾಲೆಗೆ ಕೀರ್ತಿ ತಂದಿದ್ದಾರೆ. ಸಹೋದರ ಎಚ್.ಆರ್.ಆದರ್ಶ ಮಂಡ್ಯದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದು ತಂದೆ,ತಾಯಿಯ ಸಲಹೆ, ಸೂಚನೆ, ಉಪನ್ಯಾಸಕರು, ಪ್ರಾಂಶುಪಾಲರ ಮಾರ್ಗದರ್ಶನ ತನ್ನ ಸಾಧನೆಗೆ ಮೆಟ್ಟಿಲೆಂಬುದು ಯುವತಿಯಅನಿಸಿಕೆಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಐಎಎಸ್ ಮಾಡಬೇಕೆಂಬ ಗುರಿ ಹೊಂದಿದ್ದಾಳೆ
ಅಸೋಸಿಯೆಟ್ :
ಎಂಜಿನಿಯರ್ ಹುದ್ದೆ ಕಾಲೇಜು ವತಿಯಿಂದ ಆಯೋಜಿಸಿದ್ದ ಕ್ಯಾಂಪಸ್ ಆಯ್ಕೆ ವೇಳೆ ಪ್ರಥಮ ಪ್ರಯತ್ನದಲ್ಲೇ ಎಲ್ ಅಂಡ್ ಟಿ (ಲಾರ್ಸನ್ ಅಂಡ್ ಟಬೋì) ಕಂಪನಿಯ ಅಸೋಸಿಯೆಟ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದು, ಎರಡು ವರ್ಷಗಳ ಕರಾರಿನ ಮೇರೆಗೆ ಮೈಸೂರು ಕಂಪನಿಯಲ್ಲಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.