Advertisement

ಕೋಲ್ಕತ್ತಾ ಚಿತ್ರೋತ್ಸವದಲ್ಲಿ ಕನ್ನಡದ ಏಳು ಚಿತ್ರಗಳು

05:45 PM Nov 11, 2017 | Team Udayavani |

ಗೋವಾದ ಪಣಜಿಯಲ್ಲಿ ನವೆಂಬರ್‌ 20ರಿಂದ 28ರವರೆಗೂ ನಡೆಯುವ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಕೇವಲ ಒಂದೇ ಒಂದು ಚಿತ್ರ ಆಯ್ಕೆಯಾಗಿದೆ. ಇನ್ನೊಂದು ಕಡೆ ನಿನ್ನೆಯಿಂದ ಪ್ರಾರಂಭವಾದ ಕೋಲ್ಕತ್ತಾ ಚಿತ್ರೋತ್ಸವದ ವಿವಿಧ ವಿಭಾಗಗಳಲ್ಲಿ ಒಟ್ಟು ಐದು ಚಿತ್ರ ಪ್ರದರ್ಶನವಾಗುತ್ತಿರುವುದು ವಿಶೇಷ.

Advertisement

ಹೌದು, ನವೆಂಬರ್‌ 10ರಿಂದ 17ರವರೆಗೂ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದ್ದು, ಶುಕ್ರವಾರ ಈ ಚಿತ್ರೋತ್ಸವದ ಉದ್ಘಾಟನೆಯಾಗಿದೆ. ಈ ಚಿತ್ರೋತ್ಸವದ ಉದ್ಘಾಟನೆಯಲ್ಲಿ ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌, ಶಾರೂಖ್‌ ಖಾನ್‌, ಕಾಜೋಲ್‌ ಮುಂತಾದ ಹಲವರು ಭಾಗವಹಿಸಿದ್ದಾರೆ.

ಈ ಚಿತ್ರೋತ್ಸವದ ಭಾರತೀಯ ಸ್ಪರ್ಧೆ ವಿಭಾಗದಲ್ಲಿ ಕನ್ನಡದ ಎರಡು ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಬಿ. ಸುರೇಶ ನಿರ್ದೇಶನದ “ಉಪ್ಪಿನ ಕಾಗದ’ ಒಂದಾದರೆ, ಎರಡನೆಯದು, ಪಂಚಾಕ್ಷರಿ ನಿರ್ದೇಶನದ “ಪಾತುಮ್ಮ’. ಇನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳ ವಿಭಾಗದಲ್ಲಿ ಕನ್ನಡದ “ರಿಸರ್ವೇಶನ್‌’ ಮತ್ತು ತುಳುವಿನ “ಮದಿಪು’ ಚಿತ್ರಗಳು ಪ್ರದರ್ಶನವಾದರೆ, ಮಕ್ಕಳ ವಿಭಾಗದಲ್ಲಿ “ಪುಟಾಣಿ ಸಫಾರಿ’ ಚಿತ್ರ ಪ್ರದರ್ಶನವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next