Advertisement
ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಿ ಅಮೋಘ ಫಾರ್ಮ್ನಲ್ಲಿರುವ ಮಾರ್ನಸ್ ಲಬುಶೇನ್ ಅವರು ಚೊಚ್ಚಲ ಬಾರಿಗೆ ಏಕದಿನ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಭಾರತ ವಿರುದ್ಧ ಪಾದಾರ್ಪಣೆ ಮಾಡುವುದು ಬಹುತೇಕ ಖಚಿತವೆನಿಸಿದೆ. ಕಳೆದ ವರ್ಷ ಟೆಸ್ಟ್ಗೆಪಾದಾರ್ಪಣೆಗೈದ ಬಳಿಕ ಲಬುಶೇನ್ 58.05 ಸರಾಸರಿಯಲ್ಲಿ ರನ್ ಗಳಿಸುತ್ತ ಬಂದಿದ್ದಾರೆ. ಮುಂಬಯಿಯಲ್ಲಿ ಮೊದಲ ಏಕದಿನ
ವರ್ಷಾರಂಭದಲ್ಲಿಯೇ ಭಾರತೀಯ ಅಭಿ ಮಾನಿಗಳಿಗೆ ಆಸ್ಟ್ರೇಲಿಯ ಆಟಗಾರರ ಆಟವನ್ನು ನೋಡುವ ಅವಕಾಶ ಸಿಕ್ಕಿದೆ. ಸರಣಿಯ ಮೊದಲ ಪಂದ್ಯ ಮುಂಬಯಿಯಲ್ಲಿ ಜ. 14ರಂದು ನಡೆ ಯಲಿದೆ. ರಾಜ್‌ಕೋಟ್ (ಜ. 17) ಮತ್ತು ಬೆಂಗಳೂರು (ಜ. 19) ಮುಂದಿನೆರಡು ಪಂದ್ಯಗಳು ನಡೆಯಲಿವೆ.
ಆರನ್ ಫಿಂಚ್ (ನಾಯಕ), ಸೀನ್ ಅಬೋಟ್, ಆ್ಯಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್‌ಕಾಂಬ್, ಜೋಸ್ ಹೆಝಲ್‌ವುಡ್, ಮಾರ್ನಸ್ ಲಬುಶೇನ್, ಕೇನ್ ರಿಚಡ್ಸìನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆ್ಯಸ್ಟನ್ ಟರ್ನರ್, ಡೇವಿಡ್ ವಾರ್ನರ್, ಆ್ಯಡಂ ಝಂಪ.