Advertisement
ಪ್ರತೀ ಬಾರಿ ಪ್ರತಿಕೂಲ ಹವಾಮಾನ ಹಾಗೂ ನುಸಿಬಾಧೆಯಿಂದಾಗಿ ಫಸಲು ಕಡಿಮೆಯಾಗುತ್ತಿದ್ದರೆ, ಈ ಬಾರಿ ಆಗಾಗ್ಗೆ ಬರುತ್ತಿದ್ದ ಉತ್ತಮ ಮಳೆಯಿಂದಾಗಿ, ಚಳಿ ಸಹಿತ ಉತ್ತಮ ವಾತಾವರಣದಿಂದಾಗಿ ಉತ್ತಮ ಇಳುವರಿ ಬಂದಿದೆ.
ಹೆಮ್ಮಾಡಿ ಗ್ರಾಮದ ಬಹುಭಾಗ, ಕಟ್‌ಬೆಲೂ¤ರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ ಬೆಳೆಯುತ್ತಾರೆ. ಹೆಮ್ಮಾಡಿಯಲ್ಲಿ 42 ಮಂದಿ, ಕಟ್ ಬೆಲೂ¤ರು ಗ್ರಾಮದ 6 ಮಂದಿ ಹಾಗೂ ಕನ್ಯಾನ ಗ್ರಾಮದ 6 ಮಂದಿ ಬೆಳೆಯುತ್ತಾರೆ. ಹೇಗಿದೆ ಧಾರಣೆ?
ಒಂದು ಸಾವಿರ ಸೇವಂತಿಗೆ ಹೂವಿಗೆ ಕೆಲವು ದಿನದ ಹಿಂದೆ 150 ರೂ. ದರ ಇತ್ತು. ಆದರೆ ಈಗ 120, 130, 140 ರೂ. ಹೀಗೆ ಒಂದೊಂದು ರೀತಿಯ ಬೆಲೆಯಲ್ಲಿ ಖರೀದಿಯಾಗುತ್ತಿದೆ. 1 ಸಾವಿರ ಹೂವು ಕೊಯ್ದು ಕಟ್ಟಿ ಕೊಟ್ಟವರಿಗೆ 50 ರೂ. ಇದೆ. 120, 130 ರೂ.ನಲ್ಲಿ ಮಾರಾಟವಾದರೆ ಅದನ್ನು 4-5 ತಿಂಗಳಿನಿಂದ ಬೆಳೆಸಿ, ಪೋಷಿಸಿದವರಿಗೆ ಲಾಭವಿಲ್ಲದಂತಾಗಿದೆ. ಜಾತ್ರೆ ಸೀಸನ್‌ಗಿಂತ ಮೊದಲೇ ಹೂವು ಅರಳಿ, ಕೆಲವು ಕರಟಿ ಹೋಗಿರುವುದು ಸಹ ನಷ್ಟ ತಂದಿದೆ ಎನ್ನುತ್ತಾರೆ ಹೆಮ್ಮಾಡಿಯ ಸೇವಂತಿಗೆ ಬೆಳೆಗಾರರಾದ ಪ್ರಶಾಂತ್ ಭಂಡಾರಿ.
Related Articles
ಹೆಮ್ಮಾಡಿ ಸೇವಂತಿಗೆಯನ್ನು ಬಹುಪಾಲು ಮಂದಿ ಬೆಳೆಸುವುದೇ ಮಾರಣಕಟ್ಟೆಯ ಹಬ್ಬಕ್ಕಾಗಿ. ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಅತ್ಯಂತ ಪ್ರಿಯವಾಗಿದ್ದು, ಬೆಳೆಗಾರರು ಮೊದಲ ಫಸಲನ್ನು, ಭಕ್ತರು ಜಾತ್ರೆಯ ದಿನ ಸೇವಂತಿಗೆ ಹೂವನ್ನೇ ಸಮರ್ಪಿಸುತ್ತಾರೆ. ಈ ಹೂವನ್ನು ಅರ್ಪಿಸಿ ಪ್ರಾರ್ಥಿಸಿದರೆ ಇಷ್ಟಾರ್ಥಗಳೆಲ್ಲ ಈಡೇರುತ್ತವೆ ಎನ್ನುವ ಪ್ರತೀತಿಯಿದೆ.
Advertisement
ಮಾರಣಕಟ್ಟೆ ಜಾತ್ರೆಯ ಬಳಿಕ ಉಡುಪಿ, ಮಂಗಳೂರು, ಭಟ್ಕಳ, ಹೊನ್ನಾವರದ ಗೆಂಡ, ವಾರ್ಷಿಕ ಉತ್ಸವಗಳಲ್ಲಿ ಮಾರಾಟವಾಗುತ್ತದೆ. ಕುಂದಾಪುರ, ಬೈಂದೂರು ಭಾಗದಲ್ಲಿ ಜನವರಿಯಿಂದ ಮಾರ್ಚ್‌ವರೆಗೂ ನಿರಂತರವಾಗಿ ದಿನಕ್ಕೆರಡು ದೇವಸ್ಥಾನ, ದೈವಸ್ಥಾನಗಳ ಗೆಂಡ- ಜಾತ್ರೆಗಳಿಗೆ ಹೆಮ್ಮಾಡಿ ಸೇವಂತಿಗೆಗೆ ಬೇಡಿಕೆಯಿರುವುದು ವಿಶೇಷ.
ಮಾರಣಕಟ್ಟೆ ಜಾತ್ರೆ ವೇಳೆಗೆ ಉತ್ತಮ ಇಳುವರಿ ಬಂದಿದೆ. ಆದರೆ ದರ ಮಾತ್ರ 120-140 ರೂ. ಇದ್ದು ಬೆಳೆಗಾರರಿಗೆ ಏನೇನು ಲಾಭವಿಲ್ಲ. ಕೊçದವರಿಗೆ ಬಹುಪಾಲು ಕೊಡಬೇಕಾಗುತ್ತದೆ. ಬೆಳೆದವರಿಗೆ ಲಾಭ ಸಿಗಬೇಕಾದರೆ 1 ಸಾವಿರ ಹೂವಿಗೆ ಕನಿಷ್ಠ 200 ರೂ. ಇರಬೇಕು.– ಮಹಾಬಲ ದೇವಾಡಿಗ, ಅಧ್ಯಕ್ಷರು ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ