ಹುಬ್ಬಳ್ಳಿ: 28 ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮುನ್ನುಡಿ ಬರೆದಿರುವುದು ನಮ್ಮ ಹೆಮ್ಮೆ ಎಂದುಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.
ಯುವ ಬ್ರಿಗೇಡ್‌ನಿಂದ ಸ್ವಾತಂತ್ರ್ಯೋತ್ಸವಕ್ಕೆ 75ನೇ ಸಂಭ್ರಮದ ನಿಮಿತ್ತ ಆಯೋಜಿಸಿದ್ದ ಸೇವಾಕುಂಭ ಕಾರ್ಯಕ್ರಮದಲ್ಲಿ ಮಾತನಾಡಿ ದಅವರು, ಒಂದು ಶಾಲೆ ಹೇಗಿರಬೇಕು ಎನ್ನುವ ಪರಿಕಲ್ಪನೆ ಅಡಿಯಲ್ಲಿ ಶಾಲೆಯ ಅಭಿವೃದ್ಧಿಗೆ ಮುಂದಾದೆ. ಅದೇ ನಾನು ಮಾಡಿರುವ ಕಾರ್ಯವಾಗಿದ್ದು, ನಾನು ಮಾಡಿರುವುದು ಏನೂ ಅಲ್ಲ. ಹಣ್ಣುಮಾರಿ ಬರುವ ಆದಾಯದಲ್ಲಿ ಒಂದಿಷ್ಟು ಹಣವನ್ನು ಶಾಲೆಯ ಅಭಿವೃದ್ಧಿಗೆನೀಡಿದ್ದೇನೆ ಅಷ್ಟೆ ಎಂದು ಹೇಳಿದರು. ರೇಷನ್ ಪಡೆಯಲು ಅಂಗಡಿಯ ಸರದಿಯಲ್ಲಿ ನಿಂತಾಗ ಪ್ರಧಾನಮಂತ್ರಿಗಳಕಚೇರಿಯಿಂದ ಬಂದ ದೂರವಾಣಿ ಕರೆ ನನ್ನನ್ನು ಚಕಿತಗೊಳಿಸಿತು. ಕನ್ನಡವೇ ಸರಿಯಾಗಿ ಬಾರದ ನನಗೆ ಹಿಂದಿಹೇಗೆ ಅರ್ಥವಾದೀತು. ಅಲ್ಲಿಯೇ ಪಕ್ಕದಲ್ಲಿದ್ದ ನಮ್ಮವರ ಕೈಯಲ್ಲಿ ಫೋನು ಕೊಟ್ಟು ಮಾತನಾಡಿಸಿದೆ. ಅವಾಗ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸುದ್ದಿ ತಿಳಿಯಿತು. ಅವರಿಗೆ ಧನ್ಯವಾದ ತಿಳಿಸಲು ಹೇಳಿದೆ ಎಂದರು.
ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಯುವಾ ಬ್ರಿಗೇಡ್ 6ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಇದರ ಜೊತೆಯಲ್ಲಿ ಅದೇ ಸಂಘಟನೆಯ ಮೂಲಕ ಸೇವಾಕುಂಭ ಮಾಡುವ ಮೂಲಕ ಸಮಾಜದಲ್ಲಿ ಸೇವಾ ಕಾರ್ಯಮಾಡುತ್ತಿದ್ದಾರೆ. ಇಂತಹ ಸಂಘಟನೆಗಳುಹೆಚ್ಚು ಹೆಚ್ಚು ಬೆಳೆಯಬೇಕೆಂದರು. ಯುವಾ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲಿ ಮಾತನಾಡಿ, ಯುವ ಬ್ರಿಗೇಡ್‌ನಿಂದ ಸೇವಾ ಕುಂಭದವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಸಂಘಟನೆಗಳಪ್ರಮುಖರನ್ನು ಕರೆದು ಅವರಿಗೆ ಸೂಕ್ತಮಾರ್ಗದರ್ಶನ ನೀಡಲಾಗುವುದು. ಸದ್ಯ 20ಕ್ಕೂ ಹೆಚ್ಚು ಸಂಸ್ಥೆಗಳ ಪ್ರಮುಖರು ಬಂದಿದ್ದು, ಸೇವೆ ಎಂದರೆಏನು, ಹೇಗೆ ಮಾಡಬೇಕು ಎಂಬುದರ ಕುರಿತು ತಿಳಿಸಿಕೊಡಲಾಗುವುದು ಎಂದು ಹೇಳಿದರು. ಉ.ಕ ಯುವಾ ಬ್ರಿಗೇಡ್ ಸಂಚಾಲಕ ಕಿರಣರಾಮ್ ಮಾತನಾಡಿದರು.
ಮಾಹಿತಿ ಹಂಚಿಕೊಂಡ ಸೇವಾಕರ್ತರು :
ಬುದ್ಧಿಮಾಂದ್ಯ ಮಕ್ಕಳಿಗಾಗಿ ಶ್ರೀಕಾಂತ ಬೆಟಗೇರಿಯವರು ಬೆಂಗಳೂರಿನ ದಾಬಸ್ ಪೇಟೆಯಲ್ಲಿ ಧರಿತ್ರೀ ಟ್ರಸ್ಟ್ ಅನ್ನು ಆರಂಭಿಸಿದ್ದು, ಮಾಹಿತಿ ಹಂಚಿಕೊಂಡರು. ಗೋಶಾಲೆಯ ಬುದ್ಧಿಮಾಂದ್ಯ ಮಕ್ಕಳು ಬೆರಣಿ ತಟ್ಟುತ್ತಾರೆ. ಗೋ ಸೇವೆ ಮಾಡ್ತಾರೆ.ಹಾಲು ಹಿಂಡುತಾರೆ. ಪ್ರತಿದಿನ ಲಕ್ಷ್ಮೀ ಎನ್ನುವ ಬುದ್ಧಿಮಾಂದ್ಯ ಹುಡುಗಿ ಅಡುಗೆಗೆ ಬೇಕಾದ ನಾಲ್ಕು ತೆಂಗಿನಕಾಯಿಗಳನ್ನು ತುರಿಯುತ್ತಾಳೆ ಎಂಬಿತ್ಯಾದಿ ವಿಷಯ ಹಂಚಿಕೊಂಡರು. ಶರಣ್ಯ ಗ್ರಾಮೀಣ ನೋವು ನಿವಾರಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಿ.ಎಲ್. ಮಂಜುನಾಥ ಮಾತನಾಡಿ, 2004ರಲ್ಲಿ ಸಂಸ್ಥೆ ಶುರುವಾಗಿದೆ. ಕ್ಯಾನ್ಸರ್ ಗುಣವಾಗದೇ ಕೊನೆ ದಿನಗಳನ್ನೆಣಿಸುವವರ ಶುಶ್ರೂಷಾ ಸಂಸ್ಥೆ ಇದಾಗಿದೆ. ಪ್ರಸ್ತುತ 10.5 ಎಕರೆ ಜಾಗದಲ್ಲಿ 20 ಜನ ರೋಗಿಗಳಿದ್ದಾರೆ. ಅಡ್ವಾನ್ಸಡ್ ಸ್ಟೇಜ್‌ನಲ್ಲಿರೋ ರೋಗಿಗಳಿಗೆ ಶರಣ್ಯದಲ್ಲಿ ಸೇವೆ ನಡೆದಿದೆ. ಮೊದಲು ಮನೆ ಮನೆಗೆ ಹೋಗಿ ಸೇವೆ ಸಲ್ಲಿಸಲಾಗುತ್ತಿತ್ತು. ಕೋವಿಡ್ ಕಾರಣದಿಂದ ಅದೀಗ ಇಲ್ಲ ಎಂದು ತಿಳಿಸಿದರು. ನಂತರ ಕೃಷಿ ಸೇವೆ ಉದ್ದಿಮೆ ಹಾಗೂ ಸಾವಯವ ಕೃಷಿಯ ಕುರಿತು ಕಾಳಪ್ಪನವರ, ವಿಶಾಲ ಪಾಟೀಲ, ಆಶಾ, ಕುಮಾರ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅಪಾರ ಕೊಡುಗೆಗಳು ಸಿಕ್ಕಿವೆ. ಕಿಮ್ಸ್ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಗೆ ಸಡ್ಡು ಹೊಡೆಯುವಂತೆ ನಿರ್ಮಾಣಗೊಂಡಿದೆ. 1200 ಹಾಸಿಗೆಯ ಆಸ್ಪತ್ರೆ ಇದೀಗ 2400 ಹಾಸಿಗೆಗಳ ಆಸ್ಪತ್ರೆಯಾಗಲಿದೆ. ಶೀಘ್ರದಲ್ಲಿಯೇ ಹೃದಯ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಲಿದೆ.
–ಡಾ| ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ನಿರ್ದೇಶಕ