Advertisement
ನಗರದ ಫಲ್ಗುಣಿ,ನೇತ್ರಾವತಿ ನದಿತೀರಗಳಲ್ಲಿ ಜಲ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ 13 ತೇಲುವ ಜೆಟ್ಟಿಗಳ ನಿರ್ಮಾಣ ಪ್ರಸ್ತಾವನೆ ಕಡತದಲೇ ಉಳಿದುಕೊಂಡಿದೆ. ಇದರ ಜತೆಗೆ ಕೇಂದ್ರ ಸರಕಾರದ ಸ್ವದೇಶ ದರ್ಶನ ಕೋಸ್ಟಲ್ ಟೂರಿಸಂ ಸರ್ಕ್ನೂಟ್ ಯೋಜನೆಯಡಿ ಮಂಗಳೂರಿನ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳಲ್ಲಿ ರೂಪಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸೌಲಭ್ಯಗಳ ಅಳವಡಿಕೆಗೆ ಅನುಮೋದನೆ ದೊರಕಿ ಎರಡು ವರ್ಷಗಳಾಗುತ್ತಾ ಬಂದರೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ.
Related Articles
ಕರಾವಳಿ ತೀರಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015-16ನೇ ಸಾಲಿನಲ್ಲಿ ಸ್ವದೇಶ ದರ್ಶನ ಕೋಸ್ಟಲ್ ಟೂರಿಸಂ ಸರ್ಕ್ನೂಟ್ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿತ್ತು. ಇದರಲ್ಲಿ ದ.ಕ. ಜಿಲ್ಲೆಯಲ್ಲಿ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳನ್ನು ಆಯ್ಕೆ ಮಾಡಿಕೊಂಡು 25,35,79,000 ರೂ. ವೆಚ್ಚದ ಯೋಜನ ವರದಿ ಸಿದ್ಧಪಡಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು.
Advertisement
ಯೋಜನೆಯಡಿ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳಲ್ಲಿ 25.35 ಕೋ.ರೂ. ವಿವಿಧ ಅಭಿವೃದ್ಧಿ ಕಾಮಗಾ ರಿಗಳು, ಸೌಲಭ್ಯಗಳ ಅಳವಡಿಕೆಗೆ ಅನುಮೋದನೆ ದೊರಕಿ ವರ್ಷವಾಗುತ್ತಾ ಬಂದರೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಾರದೆ ಈ ಎರಡೂ ಬೀಚ್‌ಗಳಲ್ಲಿ ಈಗಾಗಲೇ ರೂಪಿಸಿರುವ ಅಭಿವೃದ್ಧಿ ಯೋಜ ನೆಗಳು ಅನುಷ್ಠಾನವಾಗದೆ ಕಡತದಲ್ಲೇ ಬಾಕಿಯುಳಿದಿವೆ.
ಇದರಲ್ಲಿ 4.23 ಕೋ.ರೂ. ವೆಚ್ಚದಲ್ಲಿ ಪ್ರವಾಸಿ ಫೆಸಿಲಿಟೇಶನ್ ಕೇಂದ್ರ ಹಾಗೂ ಜೀವರಕ್ಷಕ ತರಬೇತಿ ಶಾಲೆ, 11.09 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು 49 ಬೆಂಚ್‌ಗಳು, 19.45 ಲಕ್ಷ ರೂ.ವೆಚ್ಚದಲ್ಲಿ 4 ಜೀವರಕ್ಷಕ ವಾಚ್ ಟವರ್, 4.01 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ, 31.13 ಕೋ.ರೂ. ವೆಚ್ಚದಲ್ಲಿ ಸಾರ್ವಜನಿಕ ಸೇವಾ ಸೌಲಭ್ಯಗಳು, 20 ಲಕ್ಷ ರೂ, ವೆಚ್ಚದಲ್ಲಿ ಸೋಲಾನ್ ಬೀದಿದೀಪಗಳ ಅಳವಡಿಕೆ, 40 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ಕೆಮರಾ ಅಳವಡಿಕೆ, 75 ಲಕ್ಷ ರೂ. ವೆಚ್ಚದಲ್ಲಿ ಬೀಚ್ ಶುದ್ಧೀಕರಣ ಸಾಮಗ್ರಿಗಳು, 1 ಕೋ.ರೂ. ವೆಚ್ಚದಲ್ಲಿ ವಾಟರ್‌ಸ್ಫೋರ್ಟ್ಸ್ ಸಲಕರಣೆಗಳು, 20 ಲಕ್ಷ ರೂ. ವೆಚ್ಚದಲ್ಲಿ ವಾಕಿಟಾಕಿ, ಹ್ಯಾಂಡ್ ಮೈಕ್, ನಿಯಂತ್ರಣ ವ್ಯವಸ್ಥೆ ಸಹಿತ ಬೀಚ್ ನಿರ್ವಹಣ ಘಟಕ, 10 ಲಕ್ಷ ರೂ. ವೆಚ್ಚದಲ್ಲಿ ಬೀಚ್ ಮಾರ್ಷಲ್ ವಾಹನ, 15 ಲಕ್ಷ ರೂ. ವೆಚ್ಚದಲ್ಲಿ ಲೈಫ್‌ಬೋಯಿ, ರಕ್ಷಣಾ ಟ್ಯೂಬ್, ರಕ್ಷಣಾ ಬೆಡ್‌ಗಳು, 2 ಲಕ್ಷ ರೂ. ವೆಚ್ಚದಲ್ಲಿ ಕ್ಯುಬಿಕಲ್ ಶೋವರ್ ಬ್ಲಾಕ್, 4.80 ಕೋ.ರೂ. ವೆಚ್ಚದಲ್ಲಿ ಕುಳೂರು ಸೇತುವೆ ಬಳಿ, ಸುಲ್ತಾನ್ ಬತ್ತೇರಿ, ಬಂಗ್ರಕುಳೂರಿನಲ್ಲಿ ತೇಲುವ ಜೆಟ್ಟಿಗಳ ನಿರ್ಮಾಣ ಯೋಜನೆಗಳು ಒಳಗೊಂಡಿವೆ.
ಅನುಮೋದನೆಯ ನಿರೀಕ್ಷೆಫಲ್ಗುಣಿ, ನೇತ್ರಾನದಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವ್ಯವಸ್ಥಿತ ಜೆಟ್ಟಿಗಳ ನಿರ್ಮಾಣ ಸಹಿತ ಮೂಲಸೌಕರ್ಯಗಳ ನಿರ್ಮಾಣಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ನದಿ ತೀರಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಿ, ಮುಂದಿನ ದಿನಗಳಲ್ಲಿ ಜಲಪ್ರವಾಸೋದ್ಯಮ ವೇಗ ನೀಡುವ ನಿರೀಕ್ಷೆ ಇದೆ.
- ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ. -ಕೇಶವ ಕುಂದರ್