Advertisement

ದಾವೂದ್‌ ಸಂಬಂಧಿ ಸೊಹೈಲ್‌ ಕಸ್ಕರ್‌ ಪಾಕಿಸ್ತಾನಕ್ಕೆ ಪರಾರಿ

07:13 PM Jan 13, 2022 | Team Udayavani |

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸೋದರ ಸಂಬಂಧಿ ಸೊಹೈಲ್‌ ಕಸ್ಕರ್‌ ದುಬೈ ಮೂಲಕ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ.

Advertisement

ಆತ ಅಮೆರಿಕದ ತನಿಖಾ ಸಂಸ್ಥೆಗಳ ವಶದಲ್ಲಿದ್ದ. ಆ ತನಿಖಾ ಸಂಸ್ಥೆಗಳ ಜೊತೆಗೆ ಮುಂಬೈ ಪೊಲೀಸರು ನಿಕಟ ಸಂಪರ್ಕ ಇರಿಸಿಕೊಂಡು, ಆತನನ್ನು ಗಡಿಪಾರು ಮಾಡಿಸುವ ಯೋಜನೆಯಲ್ಲಿದ್ದರು. ಆದರೆ ಈಗ ಆತ ಪಾಕ್‌ಗೆ ಪರಾರಿಯಾಗಿರುವ ಕಾರಣ ಗಡಿಪಾರು ವಿಚಾರದಲ್ಲಿ ಭಾರತಕ್ಕೆ ಹಿನ್ನಡೆಯಾದಂತಾಗಿದೆ.

ಆತ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ದೇಶದ ತನಿಖಾ ಸಂಸ್ಥೆಗಳು ಛೇದಿಸಿದ ಸಂದರ್ಭದಲ್ಲಿ ಅವನು ಪಾಕಿಸ್ತಾನದಲ್ಲಿರುವುದು ದೃಢಪಟ್ಟಿದೆ. ಭಾರತದಲ್ಲಿ ಸೊಹೈಲ್‌ ಕಸ್ಕರ್‌ ವಿರುದ್ಧ ನೇರವಾಗಿ ಕೇಸುಗಳು ಇಲ್ಲದಿದ್ದರೂ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಅಡಗುತಾಣವನ್ನು ಪತ್ತೆಹಚ್ಚಲು  ಹಾಗೂ ಡಿ ಕಂಪನಿ ಬಗ್ಗೆ ಮಾಹಿತಿ ಪಡೆಯಲು ಆತನನ್ನು ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಮುಂಬೈ ಪೊಲೀಸರು ಹಾಕಿಕೊಂಡಿದ್ದರು.

ಈ ಬೆಳವಣಿಗೆ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಘಟಕ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಆಗಿರುವ ದೊಡ್ಡ ಸೋಲು ಇದು ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next