Advertisement

ಸಾಲ ವಸೂಲಿಗೆ ನಿಯಮ ರೂಪಿಸಿ

03:31 PM Jul 08, 2019 | Team Udayavani |

ಹಾವೇರಿ: ಒತ್ತಾಯ ಪೂರ್ವಕವಾಗಿ ಸಾಲ ವಸೂಲಾತಿ ಮಾಡದಂತೆ ಬ್ಯಾಂಕ್‌ ಹಾಗೂ ಫೈನಾನ್ಸ್‌ ಅಧಿಕಾರಿಗಳ ಸಭೆ ಕರೆದು ಸೂಚಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎನ್‌. ತಿಪ್ಪೇಸ್ವಾಮಿ ಹೇಳಿದರು.

Advertisement

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಬ್ಯಾಂಕ್‌ ಹಾಗೂ ಫೈನಾನ್ಸ್‌ ಕಂಪನಿಯವರು ರೈತರಿಗೆ ಯಾವುದೇ ಕಡ್ಡಾಯ ಸಾಲ ವಸೂಲಾತಿ ಮಾಡಬಾರದು. ಸಾಲ ವಸೂಲಾತಿಗಾಗಿ ಕಿರುಕುಳ ನೀಡಬಾರದು. ಇಂಥ ಘಟನೆ ನಡೆದರೆ ದೂರವಾಣಿ ಮೂಲಕ ನಮ್ಮ ಗಮನಕ್ಕೆ ತಂದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಉ.ಕ. ರೈತ ಸಂಘದ ಮುಖಂಡ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಬರಗಾಲದ ಈ ಸಂದರ್ಭದಲ್ಲಿ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಮುಖ್ಯಮಂತ್ರಿಯವರು ರೈತರಿಗೆ ಯಾವುದೇ ಬ್ಯಾಂಕ್‌-ಖಾಸಗಿ ಕಂಪನಿಗಳು ನೋಟಿಸ್‌ ನೀಡುವಂತಹ ಕ್ರಮಕ್ಕೆ ಮುಂದಾಗಬಾರದು ಎಂದು ಹೇಳಿದರೂ ಬ್ಯಾಂಕ್‌, ಫೈನಾನ್ಸ್‌ಗಳು ಸಾಲ ಮರುಪಾವತಿ ಮಾಡಲು ಮುಂದಾಗುತ್ತಿರುವುದು ಖೇದಕರ ಸಂಗತಿ ಎಂದರು.

ರೈತರ ಮುಖಂಡರಾದ ಚಂದ್ರಶೇಖರ ಉಪ್ಪಿನ, ಫಕ್ಕಿರೇಶ ಕಾಳಿ, ಜಗದೀಶ ಕೂಸಗೂರ, ಸಿದ್ದಪ್ಪ ನೂಲಗೇರಿ, ಚಂದ್ರು ಗುತ್ತೂರ, ಹನುಮಂತಪ್ಪ ಸುಣಗಾರ, ಬಿ.ಡಿ. ಪಾಟೀಲ, ಮಂಜಯ್ಯ ಹಿರೇಮಠ, ಬಸವರಾಜ ಪಾಣಿಗಟ್ಟಿ, ಫಕ್ಕಿರಪ್ಪ ಒಡಯಂಪೂರ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next