Advertisement

ಪಡಿತರಕ್ಕೆ ನಿಖರ ಬೆಲೆ ನಿಗದಿಪಡಿಸಿ

02:24 PM Apr 18, 2020 | Team Udayavani |

ತಿ.ನರಸೀಪುರ: ಕೋವಿಡ್ -19 ಹಿನ್ನೆಲೆಯಲ್ಲಿ ಪಟ್ಟಣದ ದಿನಸಿ ವರ್ತಕರು ಪಡಿತರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು
ಕೇಳಿಬಂದಿದೆ. ಹೋಲ್‌ಸೇಲ್‌ ವ್ಯಾಪಾರಿಗಳಿಂದ ಮಾಹಿತಿ ಪಡೆದು ನಿಖರ ಬೆಲೆ ನಿಗದಿಪಡಿಸಬೇಕು ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ಹೇಳಿದರು.
ತಾಲೂಕು ನ್ಯಾಯ ಬೆಲೆ ಅಂಗಡಿಗಳ ಮಾಲೀಕರಿಂದ ನೀಡಲಾಗುವ ಆಹಾರದ ಕಿಟ್‌ ತಹಶೀಲ್ದಾರ್‌ ಮೂಲಕ ಬಡವರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ
ನೀಡಿ ಮಾತನಾಡಿದರು.

Advertisement

ಜನ ಸಂಕಷ್ಟದಲ್ಲಿರುವ ವೇಳೆ ವರ್ತಕರು ಮಾನವೀಯತೆ ಪ್ರದರ್ಶನ ಮಾಡಬೇಕು. ಪಡಿತರಕ್ಕೆ ಹೆಚ್ಚು ಬೆಲೆ ನಿಗದಿ ಮಾಡಿ ಜನರನ್ನು ಕಷ್ಟಕ್ಕೆ ದೂಡುವ ಕೆಲಸ ಮಾಡಬಾರದು. ತಾಲೂಕು ಆಡಳಿತದ ಅಧಿಕಾರಿಗಳು ಹೋಲ್‌ಸೇಲ್‌ ವ್ಯಾಪಾರದಾರರನ್ನು  ಭೇಟಿ ಮಾಡಿ, ಪರಿಶೀಲಿಸಿ ಬಡವರಿಗೆ ಕೈ ಗೆಟುಕುವ ಬೆಲೆಯಲ್ಲಿ ಆಹಾರ ಪದಾರ್ಥ ಕಲ್ಪಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾಂಸ ಮಾರಾಟ ಅವಶ್ಯವಿಲ್ಲ ಎಂದರು.

ತಾಲೂಕು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಎಸ್‌. ಉದಯಶಂಕರ್‌, ಖಜಾಂಚಿ ರಾಜೇಶ್‌, ಜಿಪಂ ಮಾಜಿ
ಸದಸ್ಯ ಎಂ.ಆರ್‌.ಸೋಮಣ್ಣ, ಮೂಗೂರು ಸಿದ್ದರಾಜು, ಎಂ.ಶಿವಪ್ರಸಾದ್‌, ಬಿ.ಆರ್‌. ರಾಘವೇಂದ್ರ ಸ್ವಾಮಿ, ಕೆಂಪರಾಜು, ಶಿರಸ್ತೇದಾರ್‌ ಜೆ.ಕೆ.ಪ್ರಭುರಾಜ್‌, ಆಹಾರ ಇಲಾಖೆಯ ಸಣ್ಣಸ್ವಾಮಿ, ಆರ್‌ಐ ಮಹದೇವ ನಾಯಕ್‌, ಶಂಭುದೇವನಪುರ ರಮೇಶ್‌, ವಕೀಲ ಮಹದೇವ ಸ್ವಾಮಿ, ಕೆ.ಎನ್‌. ಪ್ರಭುಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next