Advertisement

ಶೇಷವನ: ಸಂಭ್ರಮದ‌ ಮಹಾದೀಪೋತ್ಸವ

01:15 AM Nov 15, 2019 | Sriram |

ಶೇಷವನ: ದೀಪ ಬೆಳಗಿಸುವುದರ ಮೂಲಕ ಕತ್ತಲು ದೂರವಾಗಿ ಬೆಳಕು ಬರುತ್ತದೆ, ಮಾನವನ ಅಜ್ಞಾನ ತೊಲಗಿ ಜ್ಞಾನದತ್ತ ಮರಳುತ್ತಾನೆ. ಅದಕ್ಕಾಗಿ ಬೆಳಕು ಜ್ಞಾನದ ಸಂಕೇತ ಎಂಬುದಾಗಿ ಹೇಳಿದ್ದಾರೆ. ಇಂತಹ ದೀಪ ಬೆಳಗಿಸುವುಕ್ಕೆ ಸೂಕ್ತವಾದ ಮಾಸ ಕಾರ್ತಿಕಮಾಸ. ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ನಕ್ಷತ್ರ ದಿನ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಹಾದೀಪೋತ್ಸವ ಆಚರಿಸಲಾಯಿತು.

Advertisement

ಸೂರ್ಯೋದಯದಿಂದ ಸೂರ್ಯಾಸ್ತ ಮಾನದವರೆಗೆ ಶೇಷವನ ಮಹಿಳಾ ಭಕ್ತ ವೃಂದ, ಚಿನ್ಮಯ ಮಹಿಳಾ ಭಕ್ತ ವೃಂದ, ಲಕ್ಷ¾ಣಾನಂದ ಸರಸ್ವತಿ ಮಹಿಳಾ ಭಜನಾ ಮಂಡಳಿ ಅಣಂಗೂರು, ಮಹಾಗಣಪತಿ ಮಹಿಳಾ ಭಜನಾ ಸಂಘ ಮಧೂರು, ಮಹಾದೇವಿ ಮಹಿಳಾ ಭಜನಾ ಮಂಡಳಿ ಕಳತ್ತೂರು, ಕೊರತಿ ಬಂಟ್ಸ್‌ ಮಹಿಳಾ ಭಜನಾ ಸಂಘ ಬದಿಯಡ್ಕ, ರಾಜರಾಜೇಶ್ವರಿ ಮಾತೃ ಮಂಡಳಿ ಪೆರುವಾಯಿ, ಸಪ್ತಗಿರಿ ಮಹಿಳಾ ಭಜನಾ ಸಂಘ ಕಾಸರಗೋಡು, ವಿಷ್ಣುವಿನಾಯಕ ಭಜಕವೃಂದ ಕಾವುಗೋಳಿ, ಚಾಮುಂಡೇಶ್ವರಿ ಮಹಿಳಾ ಭಜನಾ ಸಂಘ ಕೂಡ್ಲು ಇವರಿಂದ ವಿಶೇಷ ಸಂಕೀರ್ತನಾರ್ಚನೆ ನಡೆಯಿತು.

ಸಂಜೆ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟ ಮತ್ತು ಶಿಷ್ಯ ವೃಂದ, ಹವ್ಯಕ ಪರಿಷತ್ತು ಮುಳ್ಳೇರಿಯ ಮಂಡಲ ಇವರಿಂದ ವೇದ ಪಾರಾಯಣ ಜರಗಿತು. ರಾತ್ರಿ ವಿಶೇಷ ಅಲಂಕಾರ ಸಹಿತ ದೀಪೋತ್ಸವದೊಂದಿಗೆ ಕಾರ್ತಿಕ ಪೂಜೆ ನಡೆಯಿತು. ನವೆಂಬರ್‌ 26 ರಂದು ಕಾರ್ತಿಕಮಾಸ ದೀಪೋತ್ಸವ ಸಂಪನ್ನ ಗೊಳ್ಳಲಿದೆ. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‌, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಸಮಿತಿ ಯುವಕ ಸಂಘ, ಮಹಿಳಾ ಸಂಘ ಕಾರ್ಯಕ್ರಮದ ನೇತೃತ್ವ ವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next