Advertisement
ಕಳೆದ ಫೆಬ್ರವರಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಅದರಂತೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, 2019ರ ಜ.1ರಿಂದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸಿ ¤ ತೆರಿಗೆ, ವಹಿ-ನಕಲು (ಖಾತಾ), ಕಟ್ಟಡ ನಕ್ಷೆ ಅನುಮೋದನೆ, ನೀರು ಮತು ¤ ವಿದ್ಯುತ್ ಸಂಪರ್ಕ, ರಸ್ತೆ ತುಂಡರಿಸುವುದು ಸೇರಿದಂತೆ ನಾಗರಿಕ ಸೇವೆಗಳು ಆನ್‌ಲೈನ್ ಮೂಲಕ ಸಿಗಲಿವೆ.
ನಾಗರಿಕ ಸೇವೆಗಳನ್ನು ಆನ್‌ಲೈನ್ ಮೂಲಕ ಕಲ್ಪಿಸಲು ಈಗಾಗಲೇ ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆ ಪೂರ್ಣಗೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳ ಕಚೇರಿ ಕಾರ್ಯಚಟುವಟಿಕೆಗಳ ಸ್ವಯಂಚಾಲಿತ ನಿರ್ವಹಣೆಗಾಗಿ ಆನ್‌ಲೈನ್ ಉದ್ಯಮ ಸಂಪನ್ಮೂಲ ಯೋಜನೆ ಅಭಿವೃದ್ಧಿಪಡಿಸಲು, ಕಟ್ಟಡ ಮತ್ತು ನಿವೇಶನಗಳ ಅನುಮೋದನಾ ಪ್ರಕ್ರಿಯೆಯ ಸ್ವಯಂಚಾಲಿತ ನಿರ್ವಹಣೆಗಾಗಿ ಆನ್‌ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಅದರಂತೆ ಕರ್ನಾಟಕ ಮುನ್ಸಿಪಲ್ ಸೊಸೈಟಿ ಮೂಲಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಗಿ ಮತ್ತು ಲೇಔಟ್ ಅನುಮೋದನಾ ವ್ಯವಸ್ಥೆ ತಂತ್ರಾಂಶವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಎಂಟು ವಲಯ ಕಚೇರಿಗಳಲ್ಲಿ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್ ಮೂಲಕ ನೀಡಲು ಕ್ರಮ ಕೈಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ.
Related Articles
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೇಔಟ್ ಅಥವಾ ಕಟ್ಟಡ ನಿರ್ಮಾಣ ಮಾಡಬೇಕಾದರೆ ಖಾತೆ, ಕಟ್ಟಡ ನಕ್ಷೆ ಅನುಮೋದನೆ, ವಿದ್ಯುತ್ ಸಂಪರ್ಕ ಮತ್ತು ನೀರಿನ ಸಂಪರ್ಕಕ್ಕಾಗಿ ರಸ್ತೆ ತುಂಡರಿಸುವುದು ಸೇರಿ ವಿವಿಧ ಸೇವೆಗಳಿಗೆ ಬೇರೆ ಬೇರೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ನಕ್ಷೆ ಮಂಜೂರಾದರೂ ಅನುಮತಿ ತಡವಾಗುತ್ತಿತ್ತು. ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯಬೇಕಿತ್ತು. ಆನ್‌ಲೈನ್ ವ್ಯವಸ್ಥೆ ಜಾರಿಯಿಂದ ಒಮ್ಮೆ ಅರ್ಜಿ ಸಲ್ಲಿಸಿದರೆ ಸಾಕು. ಆಯಾ ನಗರ ಸ್ಥಳೀಯ ಸಂಸ್ಥೆಗಳೇ ಎಲ್ಲಾ ಕೆಲಸಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಅಥವಾ ಅನುಮತಿ ಪತ್ರ ಪಡೆದು, ಕೆಲವೇ ದಿನಗಳಲ್ಲಿ ಒದಗಿಸುತ್ತದೆ. ಇದಕ್ಕೆ 30ರಿಂದ 45 ದಿನ ನಿಗದಿಪಡಿಸಲಾಗುತ್ತದೆ.
Advertisement
ಅರ್ಜಿ ತಿರಸ್ಕೃತವಾದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಇತ್ಯರ್ಥವಾಗದೇ ಇದ್ದರೆ ಅಥವಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದರೆ ಅದನ್ನೇ ಅನುಮತಿ ಎಂದು ಪರಿಗಣಿಸಿ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಸೇವೆಗಳನ್ನು ಪಡೆದುಕೊಳ್ಳಲು ಅರ್ಜಿದಾರರು ಅರ್ಹರಾಗುತ್ತಾರೆ.
ಯಾವ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ?2019ರ ಜ.1ರಿಂದ ಆಸಿ ¤ ತೆರಿಗೆ, ವಹಿ-ನಕಲು (ಖಾತಾ), ಕಟ್ಟಡ ನಕ್ಷೆ ಅನುಮೋದನೆ, ನೀರು ಮತು ¤ ವಿದ್ಯುತ್ ಸಂಪರ್ಕ, ರಸ್ತೆ ತುಂಡರಿಸುವುದು ಸೇರಿ ನಗರ ಸ್ಥಳೀಯ ಸಂಸ್ಥೆಯಿಂದ ಒದಗಿಸಲಾಗುವ ನಾಗರಿಕ ಸೇವೆಗಳು.