Advertisement
ಕರ್ನಾಟಕ ರಾಜ್ಯ ಸರಕಾರಿ ಶುಶ್ರೂಷಕರ ಸಂಘದ ದ.ಕ. ಜಿಲ್ಲಾ ಶಾಖೆಯ ಆಶ್ರಯ ದಲ್ಲಿ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿಯ ಡಾ| ಬಿ. ವಿವೇಕಾನಂದ ಪ್ರಭು ಸಭಾಂಗಣದಲ್ಲಿ ಶನಿವಾರ ಜರಗಿದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶುಶ್ರೂಷಕರಿಗೆ ಉತ್ತಮ ವೃತ್ತಿಜೀವನವನ್ನು ಕಲ್ಪಿಸುವ ನಿಟ್ಟಿನಲ್ಲಿ ಪೂರಕ ಕ್ರಮಗಳು ಅಗತ್ಯ ಎಂದರು.
Related Articles
Advertisement
ಪ್ರಸ್ತಾವನೆಗೈದ ಸಂಘದ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು 1978ರಲ್ಲಿ ಪ್ರಾರಂಭವಾದ ಸಂಘ ಇದೀಗ 41 ವರ್ಷದ ಹೊಸ್ತಿಲಲ್ಲಿದ್ದು 350ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಶುಶ್ರೂಷಕರು ಎದುರಿಸುವ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಘ ಶ್ರಮಿಸುತ್ತಾ ಬಂದಿದೆ ಎಂದರು.
30ಕ್ಕೂ ಅಧಿಕ ವರ್ಷ ಶುಶ್ರೂಷ ವೃತ್ತಿಯನ್ನು ನಿರ್ವಹಿಸಿ ನಿವೃತ್ತರಾಗಿರುವ ಶಾರದಾ, ಚಂಚಲಾಕ್ಷಿ, ಗ್ರೇಸಿ ಫೆರ್ನಾಂಡೀಸ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಶುಶ್ರೂಷಕಕರಾದ ಭವಾನಿ, ಸುಮಂಗಲ, ಸುನಂದ, ಹರಿಣಿ, ಫಿಲೋಮಿನಾ ಬೆರೆಟ್ಟೊ, ಸುಭಾಷಿಣಿ, ಶಶಿಕಲಾ ಅವರು° ಸಮ್ಮಾನಿಸಲಾಯಿತು. ಶುಶ್ರೂಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಶಶಿಕಲಾ ಸ್ವಾಗತಿಸಿದರು. ಸಜಿನಿ ಸುಬ್ರಹ್ಮಣ್ಯ ನಿರೂಪಿಸಿದರು.