Advertisement
ತಾಲೂಕಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಕೇಂದ್ರದಲ್ಲಿ ಕಳೆದ 15 ದಿನಗಳಿಂದಲ್ಲೂ ಇಂಟೆರ್ ನೆಟ್ ಹಾಗೂ ಸರ್ವರ್ ಸಮಸ್ಯೆಯಿಂದ ಕಾರ್ಡ್ ನೋಂದಣಿ ನಿಲ್ಲಿಸಲಾಗಿದೆ. ಇದರಿಂದ ಬಡ ಜನರಿಗೆ ಆರೋಗ್ಯ ಕಾರ್ಡ್ ಇಲ್ಲದೇ ಚಿಕಿತ್ಸೆಗಳಿಗೆ ಹೆಚ್ಚಿನ ಹಣವನ್ನು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
10 ಸಾವಿರಕ್ಕೂ ಹೆಚ್ಚು ಕಾರ್ಡ್ ವಿತರಣೆ: ಸರ್ಕಾರದ ಅಧಿಕೃತ ಕೇಂದ್ರ ಬೇರೆ ಯಾವ ಸ್ಥಳಗಳಲ್ಲಿ ಇಲ್ಲ ಇದರಿಂದ ಹೆಚ್ಚು ನೋಂದಣಿಯು ವಿಳಂಬವಾ ಗುತ್ತಿದೆ. ಇನ್ನೂ ಹೆಚ್ಚು ಜನರಿಗೆ ಕೊಡಬಹುದು ಆದರೆ ಸರ್ವರ್ ಸಮಸ್ಯೆಯಿಂದ ಕಳೆದ 15 ದಿನಗಳಿಂದಲ್ಲೂ ಕಾರ್ಡ್ ನೋಂದಾಣಿ ಪಕ್ರಿಯೆಯು ನಿಧಾನವಾಗಿತ್ತು. ಇದರಿಂದ ತಾಲೂಕಿನ ಜನರಿಗೆ ಆರೋಗ್ಯ ಕಾರ್ಡ್‌ನ್ನು ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಜನವರಿ ತಿಂಗಳಿಂದ ಪ್ರಾರಂಭವಾದ ಕೇಂದ್ರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಡ್‌ನ್ನು ವಿತರಿಸಲಾಗಿದೆ. ಇನ್ನೂ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆದಷ್ಟು ಬೇಗ ಕಾರ್ಡ್‌ನ್ನು ವಿತರಿ ಸುವ ನಿಟ್ಟಿನಲ್ಲಿ ಹೆಚ್ಚು ಕೇಂದ್ರಗಳಲ್ಲಿ ತೆರೆಯಬೇಕೆಂದು ಸಾರ್ವಜನಿಕರು ಆಗ್ರಹಿದ್ದರು.
ಆರೋಗ್ಯ ಕಾರ್ಡ್ ಇಲ್ಲದೆ ಸಾರ್ವಜನಿಕರ ಪರದಾಟ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಕೇಂದ್ರವು ಕಳೆದ ಹಲವು ದಿನಗಳಿಂದ ನೋಂದಣಿ ಮಾಡುತ್ತಿಲ್ಲ. ಇದರಿಂದ ಬಡ ಜನರಿಗೆ ಆರೋಗ್ಯ ಕಾರ್ಡ್ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ. ತಾಲೂಕಿನಲ್ಲಿ ಒಂದೇ ಕೇಂದ್ರ ಇರುವುದರಿಂದ ಸಾಕಷ್ಟು ಜನರು ಕಾರ್ಡ್‌ಗಾಗಿ ಮುಗಿ ಬೀಳುತ್ತಿ ದ್ದಾರೆ. ಆದ್ದರಿಂದ ಮತ್ತಷ್ಟು ಕೇಂದ್ರಗಳನ್ನು ತೆರೆ ಯುವ ಮೂಲಕ ಜನ ಸಾಮಾ ನ್ಯರಿಗೆ ಅನುಕೂಲ ಮಾಡಬೇಕು ಎಂಬುದು ಕಂದ ಹಳ್ಳಿ ಗ್ರಾಮದ ನಾರಾಯಣ ಅವರ ಆಗ್ರಹವಾಗಿದೆ.
● ಫೈರೋಜ್ ಖಾನ್