Advertisement
ಹೊಸದಾಗಿ ಮದುವೆಯಾದ ಮಹಿಳೆಯರ ಹೆಸರು ಸೇರ್ಪಡೆ, ತಪ್ಪುಗಳ ತಿದ್ದುಪಡಿ, ಯಜಮಾನನ ಹೆಸರಿನಲ್ಲಿರುವ ಪಡಿತರ ಚೀಟಿ ಯಜಮಾನಿಗೆ ವರ್ಗಾವಣೆ, ವಿಳಾಸ ಬದಲಾವಣೆ, ಇತರೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅದರಲ್ಲೂ, ಆ.21ರ ವರೆಗೆ ಮಾತ್ರ ಅವಕಾಶ ನೀಡಿದ್ದು, ಜನರು ಒಮ್ಮೆಲೆ ಸೇವಾ ಕೇಂದ್ರದ ಬಳಿ ಧಾವಿಸಿ ಬರುವಂತೆ ಮಾಡಿದೆ. ಆದರೆ, ದಿನವಿಡೀ ನಿಂತರೂ ಸರ್ವರ್ ಸ್ಥಗಿತದಿಂದ ಹೆಸರು ನೋಂದಾಯಿಸಲು ಸಾಧ್ಯವಾಗದೆ ಪರದಾಡು ವಂತಾಗಿದೆ.
Related Articles
Advertisement
ಶನಿವಾರದಿಂದ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಸರ್ವರ್ ಸಮಸ್ಯೆಯಿಂದ ಇದೂವರೆಗೂ ಒಂದೇ ಒಂದು ತಿದ್ದುಪಡಿಯಾಗಿಲ್ಲ. ಸರ್ವರ್ ಸಮಸ್ಯೆ ಎಂದರೂ ಗ್ರಾಹಕರು ಸೇವಾ ಕೇಂದ್ರದ ಬಳಿ ಕುಳಿತು ಹತ್ತತ್ತು ನಿಮಿಷಕ್ಕೂ ಸರಿಯಾಯ್ತ ನೋಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಸಂಜೆ 4 ಗಂಟೆಯವರೆಗೆ ಕಾದು ಹಿಂದಿರುಗುತ್ತಾರೆ. ಪರಿಣಾಮ ಸೇವಾ ಕೇಂದ್ರದಲ್ಲಿ ಬೇರೆ ಕೆಲಸವೂ ಮಾಡಲಾಗದೆ 3 ದಿನದಿಂದ ನಷ್ಟ ಅನುಭವಿಸುತ್ತಿದ್ದಾರೆ.-ಬಿ.ಕೆ.ಈರಣ್ಣ , ಯಳನಾಡು ಸೇವಾ ಕೇಂದ್ರದ ನೌಕರ
ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ ಎದುರಾಗಿದೆ. ಈಗಾಗಲೇ ಜನರು ನಮ್ಮ ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆ ಚಿಕ್ಕನಾಯಕನಹಳ್ಳಿಗೆ ಸಮೀತವಾಗಿಲ್ಲ, ಇಡೀ ರಾಜ್ಯದ್ದಾಗಿದೆ. ತಾಂತ್ರಿಕ ವಿಭಾಗಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಸರಿಪಡಿಸುವುದಾಗಿ ಮೇಲಧಿಕಾರಿ ಗಳು ತಿಳಿಸಿದ್ದಾರೆ. ಅಲ್ಲಿಯವರೆಗೆ ಜನರು ಸಮಾಧಾನದಿಂದ ಇರಬೇಕು. ಸಮಸ್ಯೆ ಖಂಡಿತ ಬಗೆಹರಿಯುತ್ತದೆ.-ನಾಗಮಣಿ, ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ
ಕೆಲಸ ಕಾರ್ಯ ಬಿಟ್ಟು 15 ಕಿ.ಮೀ. ದೂರದ ಮೇಲನಹಳ್ಳಿಯಿಂದ ರೇಷನ್ ಕಾರ್ಡ್ ತಿದ್ದು ಪಡಿಗಾಗಿ ಹುಳಿಯಾರಿಗೆ ಬರುತ್ತಿದ್ದೇವೆ. ಬೆಳಗ್ಗೆ ಯಿಂದ ಸಂಜೆಯವರೆಗೆ ಕಾದರೂ ಸಮಸ್ಯೆ ಬಗೆ ಹರಿದಿಲ್ಲ. ಹೈರಣಾಗಿ ಹಿಂದಿರುಗುತ್ತಿದ್ದೇನೆ. ಊಟ ತಿಂಡಿಗೂ ಹೋಗದೆ ಸಾಲಿನಲ್ಲಿ ದಿನವೂ ನಿಲ್ಲುತ್ತಿದ್ದೇನೆ.-ಎಂ.ಎಚ್.ಶಾಂತಮೂರ್ತಿ, ಎಚ್.ಮೇಲನಹಳ್ಳಿ ನಿವಾಸಿ
– ಕಿರಣ್‌ಕುಮಾರ್