Advertisement

ಪೊಲೀಸ್‌ ಇಲಾಖೆಗೆ ಸರ್ವರ್‌ ಜಾಮ್‌ ಕಾಟ

10:09 AM May 15, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಟ್ರಾಫಿಕ್ ಜಾಮ್‌ ಸಮಸ್ಯೆ ಬಗೆಹರಿಸಲು ಹೆಣಗಾಡುತ್ತಿರುವ ಪೊಲೀಸ್‌ ಇಲಾಖೆಗೆ ಇದೀಗ ಸರ್ವರ್‌ ಜಾಮ್‌ ಕೂಡ ಕಾಡಲಾರಂಭಿಸಿದೆ! ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲು ಹಾಗೂ ಪ್ರಥಮ ವರ್ತಮಾನ ವರದಿ (ಎಫ್ ಐಆರ್‌) ಸೇರಿ ಇತರ ಚಟುವಟಿಕೆಗಳಿಗೆ ಆನ್‌ ಲೈನ್‌ ವ್ಯವಸ್ಥೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೊಳಿಸಿದ ಹೆಗ್ಗಳಿಕೆ ರಾಜ್ಯ ಪೊಲೀಸ್‌ ಇಲಾಖೆಯದ್ದು. ಆದರೆ, ಈ ಚಟುವಟಿಕೆಗಳನ್ನು ತ್ವರಿತವಾಗಿ ಕೈಗೊಳ್ಳಲು ಪೂರಕ ಸಾಮರ್ಥಯದ ಇಂಟರ್‌ನೆಟ್‌ ಸೇವೆ ಒದಗಿಸಿಲ್ಲ. ಇದರಿಂದ ಸರ್ವರ್‌ ಮೇಲೆ ಒತ್ತಡ ಹೆಚ್ಚಾಗಿದ್ದು, ಸೇವೆಗಳನ್ನು ಒದಗಿಸುವುದು ವಿಳಂಬವಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವಂತಾಗಿದೆ.

Advertisement

ಐಟಿ ಸಾಫ್ಟ್ವೇರ್‌ ಇಂಟ್ರಾನೆಟ್‌ ವ್ಯವಸ್ಥೆ ಉತ್ತಮವಾಗಿದ್ದರೂ ಒತ್ತಡಕ್ಕೆ ತಕ್ಕಂತೆ ಸರ್ವರ್‌ ಅಪ್‌ಗೆÅàಡ್‌ ಮಾಡದೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಇಲಾಖೆಯ ಸಾಫ್ಟ್ ವೇರ್‌ನ್ನು ರಾಜ್ಯ ಅಪರಾಧ ದಾಖಲಾತಿ ವಿಭಾಗ
(ಎಸ್‌ಸಿಆರ್‌ಬಿ) ನಿರ್ವಹಿಸುತ್ತಿದೆ. 2009ರಿಂದ ಇಂಟ್ರಾನೆಟ್‌ ಸರ್ವರ್‌ ಅಳವಡಿಸಿಕೊಂಡಿರುವ ಇಲಾಖೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಆದರೆ, ಎಂಟು ವರ್ಷದ ಹಿಂದೆ ಅಳವಡಿಸಿದ ಸರ್ವರ್‌ನ ಅಪ್‌ಗೆÅàಡ್‌ ಕಾರ್ಯ ನಡೆದಿಲ್ಲ.

ಈ ನಡುವೆ ಕಳೆದ ವರ್ಷವಷ್ಟೆ ಎಲ್ಲ ಠಾಣೆಗಳು ಕಡ್ಡಾಯವಾಗಿ ಪೊಲೀಸ್‌ ಐಟಿ ಸಾಫ್ಟ್ವೇರ್‌ ಬಳಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದರ ಪರಿಣಾಮವಾಗಿ ಸಾಫ್ಟ್ವೇರ್‌ ಬಳಕೆ ಹೆಚ್ಚಾಗಿದ್ದು, ಕಳೆದ 5-6 ತಿಂಗಳಿಂದ ಸಾಫ್ಟ್
ವೇರ್‌ನ ಸರ್ವರ್‌ನಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಇದ ರಿಂದ ಎಫ್ಐಆರ್‌ ದಾಖಲಿಸಲು ಕನಿಷ್ಠ ನಾಲ್ಕೈದು ಗಂಟೆಗಳಾಗುತ್ತಿದ್ದು, ಕೆಲವೊಮ್ಮೆ ಅರ್ಧ ದಿನ ಇದೇ ಕೆಲಸಕ್ಕೆ ವ್ಯಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೈಸೂರು, ದಾವಣಗೆರೆ, ಮಂಗಳೂರು ಮುಂತಾದೆಡೆ ಸಮಸ್ಯೆ ತೀವ್ರವಾಗಿದೆ. ಸಮಾಧಾನದ ಸಂಗತಿ ಎಂದರೆ
ಬೆಂಗಳೂರಿನಲ್ಲಿ ಈವರೆಗೆ ಇಂತಹ ದೂರು ಬಂದಿಲ್ಲ ಎನ್ನುತ್ತಾರೆ ರಾಜ್ಯ ಅಪರಾಧ ದಾಖಲಾತಿ ಮತ್ತು ಕಂಪ್ಯೂಟರ್‌ ವಿಭಾಗದ ಸಿಬ್ಬಂದಿ. ಪ್ರಸ್ತುತ ರಾಜ್ಯ ಪೊಲೀಸರು ಬಳಸುತ್ತಿರುವ ಐಟಿ ಸಾಫ್ಟ್ ವೇರ್‌ ಇಂಟ್ರಾನೆಟ್‌ 1.12 ಹಾಗೂ 2.5 ವರ್ಷನ್‌ ನದ್ದು. ಕಳೆದ 9 ವರ್ಷಗಳಿಂದ ಸಾಫ್ಟ್ವೇರ್‌ ಅಪ್‌ಗೆÅàಡ್‌ ಆಗಿಲ್ಲ ಎನ್ನುತ್ತಾರೆ ರಾಜ್ಯ ಅಪರಾಧ ದಾಖಲಾತಿ ವಿಭಾಗ ಪಿ.ರವೀಂದ್ರನಾಥ್‌.

ಏನಿದು ಪೋಲೀಸ್‌ ಐಟಿ?
ಪೊಲೀಸ್‌ ಐಟಿ ಎನ್ನುವುದು ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಸಂಕೀರ್ಣ ವ್ಯವಸ್ಥೆ. ಇದರಲ್ಲಿ ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಎಂಬ ಮೂರು ಪ್ರಮುಖ ವಿಭಾಗಗಳಿವೆ. ಪೊಲೀಸ್‌ ಆಡಳಿತ ವ್ಯವಸ್ಥೆ ಸುಧಾರಣೆ ಜತೆಗೆ ಅಪರಾಧ ಮತ್ತು ಅಪರಾಧಿಗಳ ಮಾಹಿತಿಯನ್ನೂ ಇದು ಶೇಖರಿಸಿಟ್ಟುಕೊಳ್ಳುತ್ತದೆ. ಪ್ರತಿ ಪೊಲೀಸರೂ ಕುಳಿತಲ್ಲೇ ಈ ಸಾಫ್ಟ್ ವೇರ್‌ ಸಹಾಯದಿಂದ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಇದಕ್ಕಾಗಿಯೇ ಠಾಣಾಧಿಕಾರಿಗಳಿಗೆ ಅಧಿಕೃತ ಪಾಸ್‌ವರ್ಡ್‌ ಕೊಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next