Advertisement
ಮಂಗಳೂರು ಪಾಲಿಕೆ ವ್ಯಾಪ್ತಿಯ ಹಲವು ಸೇವೆಗಳು ಆನ್‌ಲೈನ್ ಆಗಿದ್ದು, ಇ – ಖಾತಾ ಪಡೆಯಲು ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳು ಹಾಗೂ ತಾಂತ್ರಿಕವಾದ ಸವಾಲುಗಳು ಎದುರಾಗುತ್ತಿದೆ. ಕೆಲವು ಸಮಯದಿಂದ ಇ – ಖಾತಾ ಪಡೆಯಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಈ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ತಾಳೆ ಆಗುತ್ತಿಲ್ಲ. ಇನ್ನು ಖಾತಾ ಪಡೆಯಲು ಗೌಪ್ಯತೆಯ ಕಾರಣಕ್ಕೆ ಒಟಿಪಿ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದ್ದು, ಕೆಲವೊಂದು ಬಾರಿ ಒಟಿಪಿಯೇ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
Related Articles
Advertisement
ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ ಹಾಗೂ ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾವಣೆ ಮಾಡಲು ಹಾಗೂ ಆಸ್ತಿ ತೆರಿಗೆಯ ನಕಲನ್ನು ಡಿಜಿಟಲ್ ಸಹಿಯೊಂದಿಗೆ ತಂತ್ರಾಂಶದಿಂದ ಪಡೆಯಲು ಅವಕಾಶ ನೀಡಲಾಗಿದೆ.
ಸಮಸ್ಯೆ ಶೀಘ್ರ ಬಗೆಹರಿಯಲಿದೆ
ಪಾಲಿಕೆಯಲ್ಲಿ ಇ-ಖಾತ ಪಡೆದು ಕೊಳ್ಳಲು ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ರಾಜ್ಯದ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಾಗಿದೆ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ. – ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್