Advertisement
ಶನಿವಾರ ಇಲ್ಲಿನ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾ ವಿದ್ಯಾಲಯದಲ್ಲಿ 8ನೇ ತಂಡದ 48 ಪಿಎಸ್‌ಐ (ನಾಗರಿಕ ಸಿವಿಲ್), ನಾಲ್ಕನೇ ತಂಡದ ಪಿಎಸ್‌ಐ (ನಿಸ್ತಂತು), ಒಂದನೇ ತಂಡದ ಪಿಎಸ್‌ಐ (ಸಿಐಡಿ/ ಕೆ.ಎಸ್‌ಐ.ಎಸ್.ಎಫ್/ ಗುಪ್ತವಾರ್ತೆ) ಸೇರಿದಂತೆ ಒಟ್ಟಾರೆ 267 ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಮುಖ್ಯ ಅತಿಥಿಗಳಾಗಿ ಹಾಗೂ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
Related Articles
Advertisement
ಶಂಕ್ರಪ್ಪ ಕುಟುಂಬಕ್ಕೆ ಸಹಾಯ: ಪ್ರಶಿಕ್ಷಣಾರ್ಥಿಯಾಗಿ ಹೊರ ಹೊಮ್ಮಬೇಕಿದ್ದ ಸಮಯದಲ್ಲಿ ಇತ್ತೀಚೆಗೆ ಅಸಹಜ ಸಾವಿಗೀಡಾದ ಸೇಡಂ ತಾಲೂಕಿನ ಬೆನಕನಹಳ್ಳಿಯ ಬಸವರಾಜ ಶಂಕ್ರಪ್ಪ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಗೃಹ ಸಚಿವರು, ಕುಟುಂಬಕ್ಕೊಂದು ಕೆಲಸ ಹಾಗೂ ಆರ್ಥಿಕ ಸಹಾಯ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ತದನಂತರ ಬಸವರಾಜ ಕುಟುಂಬ ವರ್ಗದವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರಲ್ಲದೇ ತಮ್ಮೊಂದಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ಎಂದು ಧೈರ್ಯ ತುಂಬಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪೊಲೀಸ್ ಮಹಾನಿರ್ದೇಶಕ ಪದಮ್‌ಕುಮಾರ ಗರ್ಗ್, ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಹಾಗೂ ಇತರರು ಇದ್ದರು. ಚಿತ್ತಾಪುರ ಸಿಪಿಐ ಪಿ.ಎಂ. ಸಾಲಿಮಠ, ಲಕ್ಷ್ಮೀ ನಿರೂಪಿಸಿದರು. ಪೊಲೀಸ್ ತರಬೇತಿ ಮಹಾ ವಿದ್ಯಾಲಯದ ಡಿವೈಎಸ್ಪಿ ಎಂ.ಎಂ. ಯಾದವಾಡ ವಂದಿಸಿದರು.
ಕುಸಿದು ಬಿದ್ದ ಪ್ರಶಿಕ್ಷಣಾರ್ಥಿಗಳುಬೆಳಗ್ಗೆ 8:30ಕ್ಕೆ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನಕ್ಕೆ ಸಮಯ ನಿಗದಿಯಾಗಿತ್ತು. ಹೀಗಾಗಿ ಬೆಳಗ್ಗೆ 7:30ಕ್ಕೆ ಪ್ರಶಿಕ್ಷಣಾರ್ಥಿಗಳು ಪಥಸಂಚಲನ ಮೈದಾನಕ್ಕೆ ಬಂದು ಗೌರವ ವಂದನೆ ಸಲ್ಲಿಸಲು ತಯಾರಾಗಿದ್ದರು. ಆದರೆ ಗೃಹ ಸಚಿವ ಎಂ.ಬಿ. ಪಾಟೀಲ ಒಂದು ಗಂಟೆ ತಡವಾಗಿ ಆಗಮಿಸಿ ಗೌರವ ವಂದನೆ ಸ್ವೀಕರಿಸಿದರು. ತದನಂತರ ಭಾಷಣ ಮಾಡುವಾಗ ಸಮಯ 10 ಗಂಟೆಯಾಗಿತ್ತು. ಈ ಹೊತ್ತಿಗೆ ಬಿಸಿಲು ಜಾಸ್ತಿಯಾಗಿದ್ದರಿಂದ ಪ್ರಶಿಕ್ಷಣಾರ್ಥಿಗಳು ಒಬ್ಬೊಬ್ಬರಾಗಿ ಸುಸ್ತಾಗಿ ಕುಸಿಯಲಾರಂಭಿಸಿದರು. ಒಟ್ಟು ಐದು ಪ್ರಶಿಕ್ಷಣಾರ್ಥಿಗಳು ಕುಸಿದು ಬಿದ್ದಿರುವುದನ್ನು ಕಂಡ ಸಚಿವರು, ಕೂಡಲೇ ಪ್ರಾಥಮಿಕ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದರು. ಪ್ರಶಿಕ್ಷಣಾರ್ಥಿಗಳು ಕುಸಿಯುತ್ತಿರುವ ಬಂಧು-ಬಳಗದವರೂ ಭಾಗಿ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 267 ವಿವಿಧ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಬಂಧು-ಬಳಗದವರು, ತಂದೆ-ತಾಯಿ, ಸಹೋದರರು ಪಾಲ್ಗೊಂಡಿದ್ದರು.